ಇತ್ತೀಚಿನ ಸುದ್ದಿ
ದೇವೇಗೌಡ್ರು ವಿರೋಧ ಪಕ್ಷದ ನಾಯಕರಾಗಿದ್ರು, ಹಾಗಾದರೆ ಅವರದ್ದು ಪೋಸ್ಟು ಪುಟುಗೋಸಿನಾ?: ಸಿದ್ದರಾಮಯ್ಯ ಪ್ರಶ್ನೆ
13/10/2021, 17:33
ಬೆಂಗಳೂರು(reporterkarnataka.com): ದೇವರಾಜ ಅರಸ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಚ್. ಡಿ. ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದರೆ ಅವರದ್ದು ಪೋಸ್ಟು ಪುಟುಗೋಸಿನಾ..?
ಇದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರಶ್ನೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಕೆಂಡಾಮಂಡಲವಾದ ಸಿದ್ದರಾಮಯ್ಯ ಈ ಪ್ರಶ್ನೆ ಹಾಕಿದ್ದಾರೆ.
ಮಾಧ್ಯಮ ಜತೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕುಮಾರಸ್ವಾಮಿ ಅವರಿಗೆ ನನ್ನ ಕಂಡರೆ ಭಯ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಇಂತಹ ಬೆದರಿಕೆಗೆ ಜಗ್ಗವವನ್ನಲ್ಲ. 1971ರಲ್ಲಿ ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ ರಾಜಕೀಯ ಪ್ರವೇಶಿಸಿದ್ದೇನೆ. 50 ವರ್ಷಗಳ ರಾಜಕೀಯ ಮಾಡಿದ್ದೇನೆ. ಕುಮಾರಸ್ವಾಮಿಯವರು ಯಾವಾಗ ರಾಜಕೀಯಕ್ಕೆ ಬಂದ್ರು? ದೇವೇಗೌಡ ಅವರು ಮುಖ್ಯಮಂತ್ರಿಯಾದ ಬಳಿಕ 1997ರಲ್ಲಿ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ್ರು. ಒಬ್ಬ ಮಾಜಿ ಮುಖ್ಯಮಂತ್ರಿ ತುಂಬಾ ಲಘುವಾಗಿ ಮಾತನಾಡಬಾರದು. ಸಾಂವಿಧಾನಿಕ ಹುದ್ದೆಯ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.