ಇತ್ತೀಚಿನ ಸುದ್ದಿ
ಅಥಣಿ ತಾಲೂಕಿನ ರೈತರ ಮೊಗದಲ್ಲಿ ಹರ್ಷ ತಂದ ಡಿಸಿಎಂ ಲಕ್ಷ್ಮಣ್ ಸವದಿ: ನೀರಾವರಿ ಪಂಪ್ ಸೆಟ್ ಗಳಿಗೆ ಚಾಲನೆ
27/05/2021, 14:54
ರಾಹುಲ್ ಅಥಣಿ ಬೆಳಗಾವಿ
info.reporterkarnataka@ gmail.com
ಅಥಣಿ ತಾಲೂಕಿನ ಹಲ್ಯಾಳ ಯಾತ ನೀರಾವರಿ ಪಂಪ್ ಸೆಟಗಳಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗುರುವಾರ ಚಾಲನೆ ನೀಡಿದರು.
ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ಕೆನಾಲ್ ನೀರನ್ನು ಈ ವರ್ಷ ಮೇ ತಿಂಗಳಲ್ಲಿ ಪ್ರಾರಂಭಿಸಲಾಗಿದೆ. ಮುಂಗಾರು ಬೆಳೆಯಲು ಅನುಕೂಲವಾಗಲು ಕೆರೆ-ಕಟ್ಟೆ, ಬಾಂದಾರ ಹಾಗೂ ಮುಂತಾದವುಗಳಲ್ಲಿ ನೀರು ತುಂಬಿ ಜನರಿಗೆ ಅನುಕೂಲವಾಗುತ್ತದೆ. ಇದೇ ತೆರನಾಗಿ ಮುಂದಿನ ತಿಂಗಳಲ್ಲಿ ಕರಿಮಸೂತಿ ಯಾತ ನೀರಾವರಿ ಹಾಗೂ ಐನಾಪುರ ನೀರಾವರಿ ಗಳನ್ನು ಪ್ರಾರಂಭಿಸಿ ರೈತರಿಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ರೀತಿಯ ಚರ್ಚೆಗಳು ಆಗಿಲ್ಲ. ಈ ಕೋವಿಡ್ ಸಂದರ್ಭದಲ್ಲಿ ಈ ಕುರಿತು ಜನರ ಆರೋಗ್ಯದ ಕುರಿತು ಕಾಳಜಿ ಮಾಡುವುದು ಮಹತ್ತರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಿ. ಅರ್. ರಾಟೋಡ್, ಕೆ. ಕೆ. ಜಾಲಿಬೇರಿ, ಸಹಾಯಕ ಕಾರ್ಯ ನಿರ್ವಾಹಕರು ಕೆ ರವಿ, ಪ್ರವಿಣ ಹುಣಶೀಕಟ್ಟಿ, ರಾಜೇಂದ್ರ ರೋಡಗಿ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುದುಕಣ್ಣ. ಸೇಗುಣಸಿ, ಮಹಾದೇವ ಬಿಸಲನಾಯಕ್, ಚಂದ್ರಕಾಂತ್ ಕಾಗವಾಡ ಹಾಗೂ ಮುಂತಾದವರು ಭಾಗವಹಿಸಿದರು.