7:08 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಮಂಗಳೂರು ರಥಬೀದಿ ವೆಂಕಟರಮಣ ದೇವಳ ಶಾರದೆ ಪ್ರತಿಷ್ಠೆ: ದೀಪಾಲಂಕಾರ, ವಿಶೇಷ ಪೂಜೆ

11/10/2021, 20:55

ಮಂಗಳೂರು(reporterkarnataka.com): ನಗರದ ರಥಬೀದಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಶ್ರೀ ವೆಂಕಟರಮಣ ದೇವಳದ ಆಚಾರ್ಯ ಮಠದ ವಸಂತ ಮಂಟಪದಲ್ಲಿ ನಡೆಯುತ್ತಿರುವ 99ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವ ಅಂಗವಾಗಿ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠೆ ಸೋಮವಾರ ನಡೆಯಿತು. ಅಕ್ಟೋಬರ್ 16ರ ವರೆಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

ಭಾನುವಾರ ರಾತ್ರಿ ಗಂಟೆ 8.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ವೆಂಕಟರಮಣ ದೇವಳದ ರಾಜಾಂಗಣದಿಂದ ಉತ್ಸವ ಸ್ಥಾನಕ್ಕೆ ತರಲಾಯಿತು. ಸೋಮವಾರ ಮಧ್ಯಾಹ್ನ ಗಂಟೆ 1.00ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಿತು. ಶುಕ್ರವಾರದವರೆಗೆ ದೀಪಾಲಂಕಾರ ಹಾಗೂ ರಾತ್ರಿ ಪೂಜೆ ನಡೆಯಲಿದೆ. ಬೆಳಿಗ್ಗೆ 10.00 ಗಂಟೆಯಿಂದ 12.00 ಗಂಟೆಯವರೆಗೆ ವಿದ್ಯಾರಂಭ ಸೇವೆ ಸಂಪನ್ನಗೊಳ್ಳಲಿದೆ.

ಅ. 16 ಶನಿವಾರ ಸಂಜೆ ಗಂಟೆ 5.00ಕ್ಕೆ ಪೂರ್ಣಾಲಂಕಾರಗೊಂಡ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು. ನಂತರ ಶ್ರೀ ಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹ ವಿಸರ್ಜನೆ ನಡೆಯಲಿದೆ

ಪ್ಲವ ನಾಮ ಸಂವತ್ಸರದ ಆಸ್ವೀಜ ಶುದ್ಧ ಪಂಚಮಿ ದಿನ ಆರಂಭಗೊಂಡ ಉತ್ಸವ ಏಕಾದಶಿ ಶನಿವಾರ(ಅ.16)ರ ವರೆಗೆ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು