8:54 PM Thursday17 - April 2025
ಬ್ರೇಕಿಂಗ್ ನ್ಯೂಸ್
Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್

ಇತ್ತೀಚಿನ ಸುದ್ದಿ

ಬಾಬಾ ರಾಮ್ ದೇವ್ ವಿರುದ್ಧ ಐಎಂಎ ಮತ್ತೆ ಗರಂ: ದೇಶದ್ರೋಹ ಪ್ರಕರಣ ದಾಖಲಿಸಲು ಪ್ರಧಾನಿಗೆ ಒತ್ತಾಯ

27/05/2021, 07:43

ನವದೆಹಲಿ(reporterkarnataka news): ಕೊರೊನಾ ಲಸಿಕೆ ಹಾಗೂ ಅಲೋಪತಿ ವೈದ್ಯ ಪದ್ಧತಿ ಕುರಿತು ಟೀಕೆ ಮಾಡಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಫುಲ್ ಗರಂ ಆಗಿದೆ. ಪತಂಜಲಿ ಮುಖ್ಯಸ್ಥರಾದ ರಾಮ್ ದೇವ್ ಅವರು ಕೊರೊನಾ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಐಎಂಎ ಪ್ರಧಾನಿ 

ನರೇಂದ್ರ ಮೋದಿ ಅವರಿಗೆ ಐಎಂಎ ಪತ್ರ ಬರೆದಿದೆ.

ಅಲೋಪಥಿ ಔಷಧಗಳನ್ನು ಪಡೆಯುತ್ತಿರುವ ಲಕ್ಷಾಂತರ ಜನರು ಮೃತಪಡುತ್ತಿದ್ದಾರೆ. ಕೋವಿಡ್ ಲಸಿಕೆ ಪಡೆದ 10,000 ವೈದ್ಯರು ಸಾವನ್ನಪ್ಪಿದ್ದಾರೆ ಎಂದು  ಬಾಬಾ ರಾಮ್ ದೇವ್ ಹೇಳಿಕೆ ನೀಡಿದ್ದರು. ಅಲೋಪಥಿ ವೈದ್ಯಕೀಯ ಪದ್ಧತಿ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಾಬಾ ರಾಮ್ ದೇವ್ ಕ್ಷಮೆಯಾಚಿಸಬೇಕು ಹಾಗೂ 1,000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಪಾವತಿಸಬೇಕು ಎಂದು ಐಎಂಎ ಉತ್ತರಾಖಂಡ ಘಟಕ ನೋಟಇಸ್ ನೀಡಿತ್ತು.

ಇದರ ಬೆನ್ನಲ್ಲೇ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಐಎಂಎ, ಕೋವಿಡ್ ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಾಬಾ ರಾಮ್ ದೇವ್ ವಿರುದ್ಧ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು