11:18 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ವಿದ್ಯುತ್ ಅವಘಡಕ್ಕೆ ಪ್ರಿಜ್ ಬ್ಲಾಸ್ಟ್:  30 ಸಾವಿರ ನಗದು ಸೇರಿ 1 ಲಕ್ಷ ರೂ. ಮೌಲ್ಯ ಪೀಠೋಪಕರಣ ಭಸ್ಮ

09/10/2021, 16:38

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದಗಿರಿ ತಾಂಡ ಗ್ರಾಮದಲ್ಲಿ ಗೋಪ್ಯಾನಾಯ್ಕ ಎಂಬುವರಿಗೆ ಸೇರಿದ ಅಂಗಡಿಯಲ್ಲಿದ್ದ ಪ್ರಿಜ್ ವಿದ್ಯುತ್ ಸರಬರಾಜಿನಲ್ಲಾದ ಏರುಪೇರಿನಿಂದ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದ ಸಾವು- ನೋವು ಸಂಭವಿಸಿಲ್ಲ.

ಸೆ 7ರಂದು ರಾತ್ರಿ9 ಗಂಟೆಯಲ್ಲಿ ವಿದ್ಯುತ್ ಸರಬರಾಜಿಲ್ಲಾದ  ಏರುಪೇರಿನಿಂದಾಗಿ ಪ್ರಿಜ್ ಬ್ಲಾಸ್ಟ್ ಆಗಿದೆ. ಪ್ರಿಜ್ ಬ್ಲಾಸ್ಟ್ ಆದ ಪರಿಣಾಮ ಮೇಲ್ಚಾವಣೆ ಕಿತ್ತಿದ್ದು ಬೆಂಕಿ ಹೊತ್ತಿ ಉರಿದ ಪರಿಣಾಮ ದುಬಾರಿ ಬೆಲೆಯ ಪೀಠೋಪಕರಣಗಳು ಹಾಗೂ 30 ಸಾವಿರ ನಗದು ಹಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಈ  ಸಂದರ್ಭದಲ್ಲಿ ಹತ್ತಿರದಲ್ಲಿ ಯಾರು ಇಲ್ಲದ್ದರಿಂದಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ದುಬಾರಿ ಬೆಲೆಯ ಪೀಠೋಪಕರಣಗಳು ಹಾಗೂ ಪ್ರಿಜ್ ಸಂಪೂರ್ಣ ಭಸ್ಮಗೊಂಡಿದ್ದು. ವಿಷಯ ತಿಳಿದ ಕೂಡಲೇ ಜಾಗ್ರತರಾದ ಅಕ್ಕಪಕ್ಕದವರು ಹಾಗೂ ಗ್ರ‍ಾಮಸ್ಥರು, ಸಮಯ ಪ್ರಜ್ಞೆ ಮೆರದಿದ್ದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪ್ರಿಜ್ 

ಬ್ಲಾಸ್ಟ್ ನಿಂದಾಗಿ ಬೆಂಕಿ ಹೊತ್ತಿ ಹುರಿದಿರುವುದರಿಂದಾಗಿ ನಗದು ಹಣ ಸೇರಿದಂತೆ ದುಭಾರಿ ಪೀಟೋಪಕರಣಗಳು ಸುಟ್ಟು ಕರಕಲಾಗಿದ್ದು ಒಟ್ಟು 1 ಲಕ್ಷಕ್ಕೂ ಅಧಿಕ ನಷ್ಟ ವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು