11:04 PM Friday4 - July 2025
ಬ್ರೇಕಿಂಗ್ ನ್ಯೂಸ್
ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು?

ಇತ್ತೀಚಿನ ಸುದ್ದಿ

ದಲಿತ ಹೆಣ್ಣು ಮಗಳ ಅತ್ಯಾಚಾರಗೈದು ಹತ್ಯೆ: ನಾಳೆ ಮಸ್ಕಿಯಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

07/10/2021, 19:49

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಮಾದಿಗ ಸಮುದಾಯದ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಸಿ ಪೆಟ್ರೋಲ್ ಹಾಕಿ ಸುಟ್ಟಿರುವ ಘಟನೆಯ ವಿರುದ್ಧ ಭಾರಿ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿದೆ.

ರಾಜ್ಯ ಸರ್ಕಾರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾದಿಗರಿಗೆ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ. ಅಸ್ಪೃಶ್ಯತೆ ಆಚರಣೆ, ಮಾರಣಾಂತಿಕ ಹಲ್ಲೆ, ಕೊಲೆ, ಅತ್ಯಾಚಾರ ನಡೆಯುತ್ತಿರುವುದು ಕಂಡು ಬರುತ್ತಿದೆ. ಆದರೆ ಸರ್ಕಾರ ಇಂತಹ ಪ್ರಕರಣಗಳು ನಡೆದರೂ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳದೆ ಅಸಡ್ಡೆ, ಅಲಕ್ಷ್ಯ ತೋರುತ್ತಿದೆ. ಆಡಳಿತ ಪಕ್ಷದಲ್ಲಿ ಇರುವ ಮಾದಿಗ ಶಾಸಕರು ಈ ಕುರಿತು ಮಾತನಾಡಬೇಕು. ಹಾಗೆ ಪ್ರತಿಪಕ್ಷದಲ್ಲಿರುವ ಶಾಸಕ ಸರ್ಕಾರದ ಗಮನ ಸೆಳೆದು ಇಂತಹ ಘಟನಾವಳಿಗಳು ನಿಯಂತ್ರಿಸಲು ಒತ್ತಾಯ ಮಾಡಬೇಕು.

ಸೆ. 8ರಂದು ಸಂಜೆ 6 ಗಂಟೆಗೆ ಮಸ್ಕಿಯ ದಲಿತ, ಪ್ರಗತಿಪರ ರೈತರ, ಕನ್ನಡಪರ ಹಾಗೂ ಇನ್ನುಳಿದ ಹಲವಾರು ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದು ಎಂದು ದಲಿತ ಸಾಹಿತಿ ಸಿ.ದಾನಪ್ಪ ನಿಲೋಗಲ ಹಾಗೂ ದಲಿತ ಮುಖಂಡ   ದೊಡ್ಡಪ್ಪ ಮುರಾರಿ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು