8:59 AM Tuesday7 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಮಕ್ಕಳ, ಮಹಿಳೆಯರ ಕಳ್ಳ ಸಾಗಾಣಿಕೆ ತಡೆ ಕಾಯಿದೆ ಕುರಿತ ತರಬೇತಿ; ಸಾಮಾಜಿಕ ಪಿಡುಗುಗಳ ತಡೆಗೆ ಎಲ್ಲರೂ ಕೈಜೋಡಿಸಿ: ನ್ಯಾ ದೇವಮಾನ

06/10/2021, 10:58

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com

ಮಕ್ಕಳು , ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಸರ್ಕಾರ ಕಠಿಣ ಕಾನೂನುಗಳನ್ನು ಜಾರಿ ಮಾಡಿದ್ದು , ಇದರ ಕುರಿತು ಅರಿವು ಪಡೆಯುವ ಮೂಲಕ ಸಾಮಾಜಿಕ ಪಿಡುಗುಗಳ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಪಿ.ದೇವಮಾನ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾಡಳಿತ , ಜಿಪಂ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಇವರ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯಿದ ಕುರಿತ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿದೆ ಎಂಬ ದೂರುಗಳು ಇವೆ. ಮಕ್ಕಳು , ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಪೈಶಾಚಿಕ ಮನಸ್ಸುಗಳಿಗೆ ಶಿಕ್ಷೆ ಅಗತ್ಯವೆಂದ ಅವರು , ದೌರ್ಜನ್ಯಕ್ಕೆ ಒಳಗಾದರೂ ದೂರು ನೀಡುವ ಶಕ್ತಿ ಇಲ್ಲದವರಿಗೆ ಕಾನೂನು ಪ್ರಾಧಿಕಾರ ಉಚಿತ ನೆರವು ನೀಡುತ್ತಿದ್ದು , ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು . 

ತರಬೇತಿಯಲ್ಲಿ ಪಾಲ್ಗೊಂಡಿರುವ ಸಮಾಜದಲ್ಲಿ ಜನರ ನಡುವೆ ಕೆಲಸ ಮಾಡುವ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು , ಮೇಲ್ವಿಚಾರಕಿಯರು , ಶಿಕ್ಷಣ ಇಲಾಖೆ ಅಧಿಕಾರಿ , ಸಿಬ್ಬಂದಿ , ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಫೋಕ್ಸಾ ಕಾಯಿದೆ -೨೦೧೨ , ಮಕ್ಕಳಿಗೆ ಮಾರಕವಾಗುವಂತಹ ಮೂಢನಂಬಿಕೆಗಳ ವಿರುದ್ಧ ಸಾಮಾಜಿಕವಾಗಿ ನಡೆಯುವ ದೌರ್ಜನ್ಯ ಸಮಸ್ಯೆಗಳು , ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡ ಕಾಯಿದ ಕುರಿತ ಈ ತರಬೇತಿಯ ಪ್ರಯೋಜನ ಪಡೆದುಕೊಂಡು ಈ ಪಿಡುಗುಗಳ ತಡೆಗೆ ಶ್ರಮಿಸಬೇಕು ಎಂದರು . ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್. ಗಂಗಾಧರ್ , ಪ್ರಾಧಿಕಾರದಲ್ಲಿ ಮಹಿಳೆಯರು , ಮಕ್ಕಳಿಗೆ ಉಚಿತ ಕಾನೂನಿನ ನೆರವು ಸಿಗಲಿದ್ದು , ಇದರ ಪ್ರಯೋಜನ ಪಡೆಯಲು ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು .

 ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪಾಲಿ , ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಇಲಾಖೆ ಹೆಚ್ಚಿನ ಜವಾಬ್ದಾರಿ ವಹಿಸಿದೆ , ನಮ್ಮಲ್ಲಿನ ಅಂಗನವಾಡಿ ಮೇಲ್ವಿಚಾರಕರು ನಿಮ್ಮ ಕಣ್ಣಿಗೆ ಇಂತಹ ದುಷ್ಕೃತ್ಯಗಳು ಕಂಡಾಗ ಕೂಡಲೇ ದೂರು ನೀಡಿ ನೆರವಿಗೆ ನಿಲ್ಲಬೇಕು ಎಂದರು .

ಇಲಾಖೆಯಿಂದ ಮಹಿಳೆಯರು , ಮಕ್ಕಳ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಿವೆ , ಅಂಗನವಾಡಿಗಳ ಮೂಲಕ ಮಕ್ಕಳಿಗೆ , ಗರ್ಭಿಣಿಯರ ಅಪೌಷ್ಟಿಕತೆ ಕಡೆಗೆ ನೆರವಾಗುತ್ತಿರುವುದಾಗಿ ತಿಳಿಸಿದರು .

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಚೌಡಪ್ಪ ಮಹಿಳೆಯರು , ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ , ಅತ್ಯಾಚಾರದ ಸಂದರ್ಭದಲ್ಲಿ ಸುದ್ದಿಮಾಧ್ಯಮಗಳು ಮಕ್ಕಳ ಹೆಸರು , ವಿಳಾಸವನ್ನು ಪ್ರಕಟಿಸುವಂತಿಲ್ಲ , ಇದರಿಂದ ಮಕ್ಕಳ ಮೇಲೆ ಮಾನಸಿಕ ದೌರ್ಜನ್ಯ ಎಸಗಿದಂತಾಗುತ್ತದೆ ಎಂದು ಎಚ್ಚರಿಸಿ , ಮಕ್ಕಳ ಮೇಲಿನ ದೌರ್ಜನ್ಯ , ಬಾಲ್ಯವಿವಾಹ ತಡೆಗೆ ಸಮಾಜದ ಸಹಕಾರ ಕೋರಿದರು . ವಕೀಲರಾದ ಕೆ.ಆರ್‌ . ಧನರಾಜ್ , ಕೆ . ಮಂಜುನಾಥ್ ಮಕ್ಕಳ ಹಕ್ಕುಗಳು , ಮಹಿಳಾ ದೌರ್ಜನ್ಯ ತಡ ಕಾಯಿದೆಯಲ್ಲಿ ಸಿಗುವ ಸೌಲಭ್ಯಗಳು , ಕಾನೂನಿನ ನೆರವುಮತ್ತಿತರ ಅಂಶಗಳ ಕುರಿತು ಅರಿವು ಮೂಡಿಸಿದರು . ತರಬೇತಿಯಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು , ಮೇಲ್ವಿಚಾರಕಿಯರು , ಶಿಕ್ಷಣ ಇಲಾಖೆ ಅಧಿಕಾರಿ , ಸಿಬ್ಬಂದಿ , ಗ್ರಾಪಂ ಪಿಡಿಒಗಳು ಪಾಲ್ಗೊಂಡಿದ್ದರು .

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಇತ್ತೀಚಿನ ಸುದ್ದಿ

ಜಾಹೀರಾತು