9:12 PM Wednesday1 - May 2024
ಬ್ರೇಕಿಂಗ್ ನ್ಯೂಸ್
ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ…

ಇತ್ತೀಚಿನ ಸುದ್ದಿ

ಮೀನು ವ್ಯಾಪಾರಿಯ ಕಿಡ್ನಾಪ್: 15 ಲಕ್ಷ ರೂ. ಬೇಡಿಕೆ; ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು

03/10/2021, 23:48

ಮಲ್ಪೆ(reporterkarnataka.com):  ಮೀನು ವ್ಯಾಪಾರಿಯೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಸಾಧೀಕ್ ಎಂಬವವರು ಈ ಕುರಿತು ದೂರು ನೀಡಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದಿಂದ ತನ್ನ ತಮ್ಮ ಸುಲೈಮಾನ್  ಮೀನು ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಸೆ.30ರಂದು ಬೆಳಗ್ಗೆ 9.00 ಗಂಟೆಗೆ ಕೊಪ್ಪದ ಮನೆಯಿಂದ ಮಲ್ಪೆಗೆ ಮೀನು ಲಾರಿಯ ಚಾಲಕ ಕೆಲಸಕ್ಕೆ ಬಂದಿದ್ದ. ಅ.1ರಂದು ತನ್ನ ಇನ್ನೊಬ್ಬ ತಮ್ಮ ಶಂಶುದ್ದೀನ್ ಎಂಬಾತ ಸುಲೈಮಾನ್ ಗೆ ಕರೆ ಮಾಡಿದಾಗ ಪೋನ್ ಕರೆ ಸ್ವೀಕರಿಸಲಿಲ್ಲ. ಸೆ.2ರಂದು ಬೆಳಗ್ಗೆ 9.00 ಗಂಟೆಗೆ ಸುಲೈಮಾನ್ ನ ಮೊಬೈಲ್ ನಂಬ್ರದಿಂದ ಶಂಶುದ್ದೀನ್ ಗೆ ಕರೆ ಬಂತು. ಆ ಕಡೆಯಿಂದ ಸಮೀರ್ ಎಂಬವನು ಮಾತನಾಡಿ, ಸುಲೈಮಾನ್ ನಮ್ಮ ಜೊತೆಗೆ ಇದ್ದಾನೆ. ಆತನನ್ನು ಬಿಡಬೇಕಾದರೆ ನಮಗೆ 15 ಲಕ್ಷ ಹಣ ಕೊಡಬೇಕು. ಆತನನ್ನು ನಾವು ಸೆ.1ರಂದು ಮಲ್ಪೆಯಿಂದ ಅಪಹರಣ ಮಾಡಿದ್ದೇವೆ ಎಂದು ಹೇಳಿದ್ದನು. ನಂತರ ನಾವು ಮಲ್ಪೆಗೆ ಬಂದು ತಮ್ಮ ಸುಲೈಮಾನ್ ಬಗ್ಗೆ ವಿಚಾರಿಸಿದಾಗ ಸುಲೈಮಾನ್ ಮೀನು ಲಾರಿ ಚಾಲಕ ಕೆಲಸದ  ಜೊತೆಗೆ ಮೀನನ್ನು ಮಲ್ಪೆಯಲ್ಲಿ ತೆಗೆದುಕೊಂಡು ಕೇರಳಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು.

ನಂತರ ಸುಲೈಮಾನ್ ಮೊಬೈಲಿಗೆ ಕರೆ ಮಾಡಿದಾಗ ಆಕರೆಯನ್ನು ಸಮೀರ್ ಎಂಬವನು ಸ್ವೀಕರಿಸಿ, ನಮಗೆ ಸುಲೈಮಾನ್ ಮೀನು ವ್ಯವಹಾರದಲ್ಲಿ 15 ಲಕ್ಷ ಹಣ ಕೊಡಬೇಕು. ಆ ಕಾರಣದಿಂದ ಅವನನ್ನು ಕೇರಳದ ಹನಸ್ ಮತ್ತು ಅವರ ಸಹೋದರರು ಅಪಹರಣ ಮಾಡಿರುತ್ತಾರೆ. ನೀವು ಬಂದು 15 ಲಕ್ಷ ಹಣ ಕೊಟ್ಟು ಕರೆದುಕೊಂಡು ಹೋಗಿ. ಇಲ್ಲದಿದ್ದರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸಾದಿಕ್ ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು  ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು