2:42 AM Friday11 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಅನಾಥ, ಬಡ ಮಕ್ಕಳಿಗೆ ನಿತ್ಯ ಅನ್ನದಾನ: ಮಹಾನ್ ಸಾಧಕ ಮಸ್ಕಿಯ ಡಾ. ಶಿವಶರಣಪ್ಪ ಇತ್ಲಿ

03/10/2021, 16:47

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳ ಆಶ್ರಮದಲ್ಲಿ ನಿತ್ಯ ಅನ್ನದಾನ ಜತೆಗೆ ಶಿಕ್ಷಣಕ್ಕೆ ಸಾಥ್ ನೀಡುತ್ತಿರುವ ಡಾ. ಶಿವಶರಣಪ್ಪ ಕುಟುಂಬವು ಇದೀಗ ಮಸ್ಕಿ ಭಾಗದಲ್ಲಿ ಡಾ. ಶಿವಶರಣಪ್ಪ ಫೌಂಡೇಶನ್ ಚಾಲನೆ ನೀಡಿದೆ.


ಮೂಲತಃ ರಾಯಚೂರಿನವರಾದ ಡಾ. ಶಿವಶರಣಪ್ಪ ಕುಟುಂಬವು 50 ವರ್ಷಗಳ ಹಿಂದೆ ಮಸ್ಕಿಗೆ ಆಗಮಿಸಿತ್ತು. ಮಸ್ಕಿಯಲ್ಲಿ ಆಸ್ಪತ್ರೆ ತೆರೆದು ಡಾ. ಇತ್ಲಿ ಅವರು ವೈದ್ಯಕೀಯ ನೆರವಿನ ಜತೆಗೆ ಸಮಾಜಮುಖಿ ಕೆಲಸ ಮಾಡಲಾರಂಭಿಸಿದರು. ಡಾ. ಇತ್ಲಿ ಅವರ ಪುಣ್ಯ ಕಾರ್ಯಕ್ಕೆ ಅವರ ಕುಟುಂಬ ಕೈಜೋಡಿಸಿತು. ಇದೀಗ ಡಾ. ಶಿವಶರಣಪ್ಪ ಫೌಂಡೇಶನ್ ಎಂಬ ಸಂಸ್ಥೆ ತಲೆ ಎತ್ತಿ ನಿಂತಿದೆ. ಡಾ. ಇತ್ಲಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಘನತೆ ಮೆರೆದಿದ್ದಾರೆ. ಇಲ್ಲಿ ಬಡವರು, ಅನಾಥರು, ದಿಕ್ಕು ಇಲ್ಲದವರು ಡಾ. ಇತ್ಲಿ ಅವರನ್ನು ದೇವರ ತರಹ ಪೂಜಿಸುತ್ತಾರೆ. ಸಿಂಧನೂರಿನ ಪಿಡಬ್ಲ್ಯೂಡಿಕ್ಯಾಂಪ್ ನಲ್ಲಿರುವ ಆಶಾಕಿರಣ ಅನಾಥ ಮತ್ತು ಬಡಮಕ್ಕಳಿಗೆ ಅನ್ನದಾನ ಮಾಡುತ್ತಿದ್ದರು. ಜತೆಗೆ ಅವರ ಶಿಕ್ಷಣಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು