6:43 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

2 ವರ್ಷ ಕಳೆದರೂ ಅಲುಗಾಡದ ಫೈಲ್:  ಪತಿಯನ್ನು ಕಳೆದುಕೊಂಡ ಮಹಿಳಾ ಸಿಬ್ಬಂದಿಗೂ ಕರುಣೆ ತೋರದ ಶಿಕ್ಷಣ ಇಲಾಖೆ; ಹೊಸ ಬೆಳಕಿನ ನಿರೀಕ್ಷೆಯಲ್ಲಿ ಸುಜಾತಾ ಸಾರವಾಡ

01/10/2021, 19:49

ಭೀಮಣ್ಣ ಪೂಜಾರಿ ಶಿರನಾಳ ಬೆಂಗಳೂರು

info.reporterkarnataka@gmail.com

ರಾಜ್ಯ ಶಿಕ್ಷಣ ಇಲಾಖೆಯಲ್ಲಿ ದುಡಿಯುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರು ವಿಜಯಪುರದಿಂದ ದಿನಾ ಇಂಡಿ ತಾಲೂಕಿನ ಹಳಗುಣಕಿಗೆ ನೌಕರಿಗಾಗಿ ಆಗಮಿಸುತ್ತಿದ್ದು, ತನ್ನ ಸೇವೆಯನ್ನು ವಿಜಯಪುರದ ಬಾಲಕರ ಪದವಿಪೂರ್ವ ಕಾಲೇಜಿಗೆ ವಿಲೀನಗೊಳಿಸುವಂತೆ ಆಗ್ರಹಿಸುತ್ತಿದ್ದರೂ ಶಿಕ್ಷಣ ಇಲಾಖೆ ಮಾತ್ರ ಘೋರ ಮೌನ ವಹಿಸಿದೆ. ಪತಿಯನ್ನು ಕಳೆದುಕೊಂಡು ಅನುಕಂಪದ ಆಧಾರದಲ್ಲಿ ದಿನದ ತುತ್ತಿಗಾಗಿ ದುಡಿಯುತ್ತಿರುವ ಮಹಿಳಾ ಸಿಬ್ಬಂದಿಗೆ 45 ಕಿಮೀ ದೂರದ ಹಳಗುಣಕಿಗೆ ಹೋಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.


ವಿಜಯಪುರ ಜಿಲ್ಲೆಯ ಹಳಗುಣಕಿಯ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಹಲವು ವರ್ಷಗಳಿಂದ ಡಿ ದರ್ಜೆ ನೌಕರರಾಗಿ ದುಡಿಯುತ್ತಿರುವ ಮಹಿಳೆಯೇ ಸುಜಾತಾ ಶ್ರೀಶೈಲ್ ಸಾರಾವಾಡ ಅವರು. ಕಳೆದ ಎರಡು ವರ್ಷಗಳಿಂದ ಹಳಗುಣಕಿಯ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಡಿ ದರ್ಜೆ ನೌಕರರಾಗಿ ದುಡಿಯುತ್ತಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗಂಡನ ಆಕಸ್ಮಿಕ ಸಾವಿನಿಂದ ಕಂಗೆಟ್ಟ ಸುಜಾತಾ ಅವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಸಿಕ್ಕಿತ್ತು. ಆದರೆ ಗಂಡನ ಮನೆ ವಿಜಯಪುರದಲ್ಲಿರುವ ಕಾರಣ ಅವರಿಗೆ ಹಳಗುಣಕಿಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ದಿನಾ ಅವರು 45 ಕಿಮೀ. ದೂರದ ಇಂಡಿ ತಾಲೂಕಿನಲ್ಲಿರುವ ಹಳಗುಣಕಿಗೆ ತೆರಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಖಾಲಿ ಇರುವ ಡಿ ದರ್ಜೆಯ ಹುದ್ದೆಗೆ ತನ್ನನ್ನು ವಿಲೀನಗೊಳಿಸುವಂತೆ ಕೋರಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಮನವಿ ಕೂಡ ಸಲ್ಲಿಸಿದ್ದರು. ಸಚಿವರು ಹಾಗೂ ಸಂಸದರು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಆಗ್ರಹಿಸಿದ್ದಾರೆ. ಸಂಸದ ಜಿಗಜಿಣಗಿ ಅವರು ಸಚಿವರಿಗೆ ಪತ್ರ ಕೂಡ ಬರೆದಿದ್ದರು. ಶಿಕ್ಷಣ ಸಚಿವರು ಇಲಾಖೆಗೆ ಬರೆದಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಗೆ ನಿಯುಕ್ತಿಗೊಳಿಸಲು ನಿಯಮದಲ್ಲಿ ಅವಕಾಶವಿದೆಯೇ ಎಂದು ಕೇಳಿದ್ದಾರೆ. ಕಾನೂನು ಪ್ರಕಾರ ಅವಕಾಶವಿದೆ ಎಂದು ತಿಳಿದು ಬಂದಿದೆ. ಆದರೆ ಈ ಫೈಲ್ ಮಾತ್ರ ಬೆಂಗಳೂರಿನ ವಿಧಾನಸೌಧ ಪಕ್ಕದಲ್ಲಿರುವ ವಿಕಾಸಸೌಧ ಬಳಿ ಇರುವ ಎಂ.ಎಸ್. ಬಿಲ್ಡಿಂಗ್ ನಲ್ಲಿ ಗಟ್ಟಿಯಾಗಿ ಕುಳಿತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಕಚೇರಿ ಇರುವುದು ಇದೇ ಕಟ್ಟಡದಲ್ಲಿ. ಇಲ್ಲಿ ಈ ಫೈಲಿಗೆ ಮೋಕ್ಷ ದೊರೆತರೆ ಬಡಪಾಯಿ ಸುಜಾತಾ ಸಾರಡ್ಕ ಅವರ ಬದುಕಿನಲ್ಲಿ ಹೊಸಬೆಳಕು ಚೆಲ್ಲಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು