6:05 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪದ್ಮಶ್ರೀ ಭಟ್ ಅಭಿನಂದನಾ ಕಾರ್ಯಕ್ರಮ: ಬಹುಮುಖ ಪ್ರತಿಭೆಯ ಬಾಲ ಕಲಾವಿದರಿಗೆ ಸನ್ಮಾನ

01/10/2021, 15:16

ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆ ವತಿಯಿಂದ ವಾಯ್ಸ್ ಆಫ್ ಆರಾಧನಾ ಬಹುಮುಖ ಪ್ರತಿಭೆ ಗಳಿಗೆ ಸಂಚಾಲಕಿ  ಪದ್ಮಶ್ರೀ ಭಟ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ಸುರತ್ಕಲ್ ನ ಮಾಧವ ನಗರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅವರು ಬಹುಮುಖ ಪ್ರತಿಭೆಗಳನ್ನು ಸನ್ಮಾನಿಸಿದರು.

ಸಮಾಜ ಸೇವೆಯ ಜತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಆರದಿರಲಿ ಬದುಕು ಆರಾಧನಾ ತಂಡವನ್ನು ಶ್ಲಾಘಿಸಿದರು. ಬಹುಮುಖ ಪ್ರತಿಭೆಗಳಾದ ರುದ್ರಮನ್ಯು ಪೊನ್ನಗಿರಿ, ಶಿವಮನ್ಯು ಪೊನ್ನಗಿರಿ, ಧ್ಯಾನ್ ಮಂಗಳೂರು,ಅಭಿಷ್ಣಾ ಮಂಗಳೂರು, ತಪಸ್ಯಾ ಕಟೀಲು, ಶಾರ್ವಿ ಮಂಗಳೂರು, ಪೂರ್ವಿ ಕಟೀಲು, ಸಾನ್ವಿ ಮಂಗಳೂರು, ರಚನ್ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.

ಪದ್ಮಶ್ರೀ ಭಟ್ ಹಾಗೂ ವಿವೇಕ್ ಪ್ರಭು ಅವರ ಹುಟ್ಟುಹಬ್ಬ ಆಚರಿಸಲಾಯಿತು. ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ಆರಾಧನಾ ಭಟ್,  ದೇವಿಪ್ರಸಾದ್ ಶೆಟ್ಟಿ, ಪ್ರಸಾದ್ ಉಡುಪಿ. ವಿವೇಕ್ ಪ್ರಭು ನಿಡ್ಡೋಡಿ ರಾಕೇಶ್ ಪೊಳಲಿ, ಪದ್ಮಶ್ರೀ ಭಟ್ ನಿಡ್ಡೋಡಿ,ಆಮಂತ್ರಣ  ಪರಿವಾರದ ವಿಜಯ ಕುಮಾರ್ ಜೈನ್,ಸ್ನೇಹಲತಾ ಪೊನ್ನಗಿರಿ, ಶ್ರೀಕಾಂತ್ ಭಟ್ ಪೊನ್ನ ಗಿರಿ, ಬಾಬು ಮಂಗಳೂರು,ದಿನೇಶ್  ಕಟೀಲು, ಸುಕುಮಾರ್  ಹಾಗೂ ಆರದಿರಲಿ ಬದುಕು ಆರಾಧನಾ ಹಾಗೂ ವಾಯ್ಸ್ ಆಫ್ ಆರಾಧನಾ ಪೋಷಕರು ಉಪಸ್ಥಿತಿ ತರಿದ್ದರು. ಮಜಾಭಾರತ ಖ್ಯಾತಿಯ ಆರಾಧನಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು