10:09 AM Monday6 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಲೇಖಕಿ, ಕವಯತ್ರಿ ಅಕ್ಷತಾರಾಜ್ ಪೆರ್ಲ ಅವರ “ಬೇಲಿ ಹಾಗೂ ಸಾಪೊದ ಕಣ್ಣ್” ತುಳು ನಾಟಕ ಕೃತಿ ಲೋಕಾರ್ಪಣೆ

30/09/2021, 23:04

ಮಂಗಳೂರು(ReporterKarnataka.com) : ಲೇಖಕಿ, ಕವಯತ್ರಿ, ಆಕಾಶವಾಣಿ ಉದ್ಘೋಶಕರಾದ ಅಕ್ಷತಾ ರಾಜ್ ಪೆರ್ಲ ಅವರ ಪ್ರಶಸ್ತಿ ವಿಜೇತ ‘ಬೇಲಿ’ ಹಾಗೂ ‘ಸಾಪೊದ ಕಣ್’ ನಾಟಕ ಕೃತಿಗಳನ್ನು ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಲೋಕಾರ್ಪಣೆಗೊಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ನಂದಾದೀಪ ಪ್ರಕಾಶನ ಕನ್ಯಾನ ಜಂಟಿಯಾಗಿ ಮಂಗಳೂರು ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಗುರುವಾರ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಸಂದರ್ಭ ಮಾತಾಡಿದ ಕುಲಪತಿಗಳು, ಸಾಹಿತ್ಯ ಬೆಳೆದಂತೆ ಭಾಷೆ ಬೆಳೆಯುತ್ತದೆ. ಎಲ್ಲಾ ಪ್ರಕಾರಗಳಲ್ಲಿ ಸಾಹಿತ್ಯ ರಚನೆಯಾಗಬೇಕು, ಸಾಮಾಜಿಕ ಜಾಲತಾಣದಲ್ಲಿ ತುಳು ಭಾಷೆಯ ಬಳಕೆಯಾಗುತ್ತಿದೆ ಆದರೆ ಭಾಷೆಯ ದಾಖಲಾತಿಗೆ ಕೃತಿಗಳ ರಚನೆಯಾಗಬೇಕು ಎಂದ ಅವರು ನಾಟಕಗಳಲ್ಲಿ ಮಾನವೀಯತೆಗೆ ಒತ್ತು ನೀಡಿರುವುದು ಹಾಗೂ ಎರಡು ತುಳು ನಾಟಕಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಿದ ಲೇಖಕಿಯನ್ನು ಶ್ಲಾಘಿಸಿದರು.

ಮಂಗಳೂರು ವಿ.ವಿ ಯ ಬ್ರಹ್ಮಶ್ರೀ ನಾರಾಯಣಗುರು ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್, ಸೂಕ್ಷ್ಮವಾಗಿ ಲೋಕ ತಿದ್ದುವ ಶಕ್ತಿ ನಾಟಕಗಳಿಗಿದೆ, “ಪುರಾಣದ ಪಾತ್ರಗಳನ್ನು ಈಗಿನ ಸಾಮಾಜಿಕ ಪರಿಸ್ಥಿತಿಗೆ ಅನ್ವಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಸಾಹಿತಿಗಳು ನಿರ್ಲಕ್ಷಿಸಿರುವ ಶಿಖಂಡಿ ಪಾತ್ರವನ್ನು ಲೇಖಕಿ ಆರಿಸಿಕೊಂಡು ಅದನ್ನು ಬೆಳೆಸಿರುವುದು ಅದ್ಭುತ, ಮಂಗಳಮುಖಿಯರು ಲೋಕಕ್ಕೆ ಮಂಗಳ ತರುವವರು ಎಂಬುದನ್ನು ಲೇಖಕಿ ನಿರೂಪಿಸಿದ್ದಾರೆ ಎಂದು ಅವರು ತಿಳಿಸಿದರು.

ಕೃತಿಯನ್ನು ಪರಿಚಯಿಸಿದ ನ್ಯಾಯವಾದಿ ಹಾಗೂ ರಂಗನಿರ್ದೇಶಕ ಶಶಿರಾಜ್ ಕಾವೂರು, ಬೇಲಿ ಹಾಗೂ ಸಾಪೊದ ಕಣ್ಣ್ ನಾಟಕಗಳಲ್ಲಿ ನಾಟಕಕಾರನಿಗೆ ಇರಲೇಬೇಕಾದ ವಿವೇಚನಾಶಕ್ತಿ ಮತ್ತು ತರ್ಕವಿದೆ. ಸಣ್ಣ, ಚುರುಕಾದ, ಪರಿಣಾಮಕಾರಿ ನಿರೂಪಣೆ, ಜೊತೆಗೆ ಸಂಭಾಷಣೆಯಲ್ಲಿ ನಿರಂತರತೆಯಿದೆ. ಈ ನಾಟಕಗಳು ಆದಷ್ಟು ಬೇಗ ಬೇರೆ ಭಾಷೆಗೆ ತರ್ಜುಮೆಯಾದರೆ, ರಂಗ ಪ್ರಯೋಗವಾದರೆ ಒಳ್ಳೆಯದು, ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕಾಲೇಜ್‌ನ ಪ್ರಿನ್ಸಿಪಾಲ್ ಡಾ.ಅನುಸೂಯ ರೈ ಲೇಖಕಿ ಅಕ್ಷತಾ‌ರಾಜ್ ಪೆರ್ಲ ಅವರನ್ನು ಅಭಿನಂದಿಸಿದರು. ಎಂ.ಆರ್.ಪಿ.ಎಲ್ ಪ್ರಶಿಕ್ಷಣ ವಿಭಾಗದ ಉಪಮಹಾಪ್ರಬಂಧಕಿ ವೀಣಾ.ಟಿ.ಶೆಟ್ಟಿ, ರಾಮಕೃಷ್ಣ ಮಿಷನ್ ನ ‘ಸ್ವಚ್ಛ ಮನಸ್’ ರೂವಾರಿ ರಂಜನ್ ಬೆಳ್ಳರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು. ತುಳುಪೀಠದ ಸಂಯೋಜಕ ಡಾ. ಮಾಧವ ಎಂ ಕೆ ಅತಿಥಿಗಳನ್ನು ಸ್ವಾಗತಿಸಿದರು. ಗೀತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು