5:35 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಈ ವಾಹನಗಳಿಗೆ ಯಾರು ಸ್ವಾಮಿ ಫೈನ್ ಹಾಕುವುದು.? ಜಪ್ತಿ ಮಾಡ್ತೀರ ಕಮೀಷನರ್ ಸಾಹೇಬ್ರೆ ? ನಿಮ್ಮ ಹೆಸರಲ್ಲೇ ರಿಜಿಸ್ಟ್ರೇಶನ್ ಆಗಿದೆ ನೋಡಿ.!

30/09/2021, 20:33

ಮಂಗಳೂರು (ReporterKarnataka.com) 

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ರೀತಿಯಲ್ಲಿ ವಾಹನದ ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಹಾಕುವ ಡ್ರೈವ್ ನಡೆಯುತ್ತಾ ಇದೆ. ಇದರ ನಡುವೆ ಜನರು ಹಲವು ಕಡೆ ರೊಚ್ಚಿಗೆದ್ದಿದ್ದು ಪೋಲಿಸರ ವಾಹನದ ಡೀಟೇಲ್ ಹುಡುಕಿ ನಮ್ಮ ವಾಹನಗಳಿಗೆ ಫೈನ್ ಹಾಕಿದವರ ವಾಹನಕ್ಕೆ ಯಾರು ಫೈನ್ ಹಾಕುತ್ತಾರೆ ಎಂದು ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ.

ಹಲವಾರು ಪೋಲಿಸ್ ವಾಹನಗಳ ಡಾಕ್ಯುಮೆಂಟ್‌ಗಳೇ ಸರಿ ಇಲ್ಲ. ನಿನ್ನೆಯಷ್ಟೆ ಪೋಲಿಸ್ ವಾಹನದ ನಂಬರ್ ಪ್ಲೇಟ್ ಕುರಿತ ಹಾಗೆ ಫೋಟೊ ಒಂದು ವೈರಲ್ ಆಗಿತ್ತು. ಹಾಗೆಯೆ ಇವತ್ತು ಸೋಮೇಶ್ವರದಲ್ಲಿ ಫೈನ್ ಹಾಕುತ್ತಿದ್ದ ಪೋಲಿಸ್ ವಾಹನ ಹಾಗೂ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬಳಿ ಇದ್ದ ಪೋಲಿಸ್ ಇಲಾಖೆಯ ಹೊಯ್ಸಳ ವಾಹನದ ನಂಬರ್ ಡಿಟೇಲ್ ತೆಗೆದು ರಿಪೋರ್ಟರ್ ಕರ್ನಾಟಕಕ್ಕೆ ಓದುಗರು ಕಳಿಸಿದ್ದಾರೆ.

ವಿಚಿತ್ರವೆಂದರೇ ಈ ಎರಡೂ ವಾಹನಗಳ ಇನ್ಸುರೆನ್ಸ್ ಅವಧಿ ಮುಕ್ತಾಯಗೊಂಡು ವರ್ಷಗಳೇ ಕಳೆದಿದೆ. ಸೋಮೇಶ್ವರದಲ್ಲಿದ್ದ KA19G0670 ವಾಹನ ಜಾಯಿಂಟ್ ಕಮೀಷನರ್ ಆಫ್ ಹೆಸರಲ್ಲಿ ನೋಂದಾವಣಿಯಾಗಿದೆ. ಇದರ ವಿಮೆ ಅವಧಿಯೂ 2014ರಲ್ಲಿಯೇ ಮುಗಿದಿದೆ, ಹಾಗೆಯೇ ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನಲ್ಲಿದ್ದ ಹೊಯ್ಸಳ ವಾಹನ KA19G0748 ಇದರ ವಿಮೆ ಅವಧಿಯೂ 2017 ರಲ್ಲಿ ಮುಕ್ತಾಯಗೊಂಡಿದೆ. 

ಹೀಗೆ ಹಿಂದೊಮ್ಮೆ ಟೋಯಿಂಗ್ ವಾಹನವೂ ವಿಮೆ ಮುಗಿದ ಬಳಿಕವೂ ಪೋಲಿಸರಿಗಾಗಿ ಕೆಲಸ ಮಾಡ್ತಿತ್ತು. ಆದರೆ ಇದೆಲ್ಲ ವಾಹನಗಳಿಗೆ ಫೈನ್ ಹಾಕುವವರು ಯಾರು ? ಇವುಗಳನ್ನು ಜಪ್ತಿ ಮಾಡುವವರು ಯಾರು..? ಈ ವಾಹನಗಳಿಂದ ಅಪಘಾತವಾದಾಗ ಪರಿಹಾರ ಒದಗಿಸುವ ಜವಾಬ್ದಾರಿ ಯಾರಿಗೆ..? ಎನ್ನುವ ಪ್ರಶ್ನೆಗಳು ಮೂಡಿಕೊಳ್ಳುತ್ತಿವೆ.

ಸ್ಥಳೀಯ ಜನರ ವಾಹನಗಳನ್ನು ತಡೆದು ನಿಲ್ಲಿಸಿ ಫೈನ್ ಹಾಕುವ ಪೋಲಿಸರೇ ತಮ್ಮ ವಾಹನಗಳ ಡಾಕ್ಯುಮೆಂಟ್ ಬಗ್ಗೆ ಗಮನ ಹರಿಸದೇ ಇರುವಾಗ ಇದಕ್ಕೆ ಹೊಣೆ ಯಾರು ಎನ್ನುವುದು ಸಾರ್ವಜನಿಕ ವಲಯದ ಪ್ರಶ್ನೆಯಾಗಿದೆ. ಜನರ ವಾಹನದ ಮೇಲೆ ಕೇಸ್ ದಾಖಲಿಸುವ ಕಮೀಷನರ್ ಸಾಹೆಬ್ರಾ ಡ್ರೈವ್ ಒಳಗಡೆ ಪೋಲಿಸ್ ವಾಹನಗಳಿಗೂ ದಂಡ ಬೀಳುವುದೇ ಎಂದು ಕಾದು ನೋಡಬೇಕಾಗಿದೆ ..!

ಇತ್ತೀಚಿನ ಸುದ್ದಿ

ಜಾಹೀರಾತು