ಇತ್ತೀಚಿನ ಸುದ್ದಿ
ಕಾರ್ಕಳ: ಕೆಲಸಕ್ಕೆಂದು ಹೊರಟ ಯುವತಿ ವಾಪಸು ಬಾರದೆ ನಿಗೂಢ ನಾಪತ್ತೆ; ದೂರು ದಾಖಲು
28/09/2021, 23:43
ಕಾರ್ಕಳ(reporterkarnataka.com): ನಗರದಲ್ಲಿ 21ರ ಹರೆಯದ ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಸಾ (21) ನಾಪತ್ತೆಯಾದ ಯುವತಿ.ಪಿಯುಸಿ ವ್ಯಾಸಂಗ ಮುಗಿಸಿ ಮನೆಯಲ್ಲಿಯೇ ಇದ್ದು, ಕೆಲಸಕ್ಕೆ ಹೋಗುವ ವಿಚಾರದಲ್ಲಿ ತಾಯಿಯ ಮಾತಿಗೆ ಕೋಪಗೊಂಡು ಸೆ.25 ರಂದು ಸಂಜೆ 6.45ರ ಹೊತ್ತಿಗೆ ತನ್ನ ಮನೆಯಾದ ಕಸಬ ಗ್ರಾಮದ ಕಾಬೆಟ್ಟುವಿನ ಚೋಲ್ಪಾಡಿ ಎಂಬಲ್ಲಿಂದ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೊರಟು ಹೋದವಳು ಈ ತನಕ ವಾಪಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎನ್ನಲಾಗಿದೆ.