1:56 PM Tuesday26 - November 2024
ಬ್ರೇಕಿಂಗ್ ನ್ಯೂಸ್
ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ವಧು-ವರರ, ವಿಧುರ-ವಿಚ್ಛೇದಿತರ ಹಾಗೂ ವಿಕಲಚೇತನರ ರಾಜ್ಯಮಟ್ಟದ ಬೃಹತ್ ಸಮಾವೇಶ

28/09/2021, 16:02

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಜ್ಯೋತಿಭಾ ಪುಲೆ ಹಾಗೂ ಸಾವಿತ್ರಿ ಬಾಯಿ ಪುಲೆ ದೇಶದ ಮಹಾನ ದಾರ್ಶನಿಕರು. ಪುಲೆಯಂತಹ ಮಹಾನ್ ಆದರ್ಶ ವ್ಯಕ್ತಿಗಳು ಕೇವಲ ಒಂದು ಮಾಳಿ ಸಮಾಜಕ್ಕೆ ಸೀಮಿತವಾಗದೆ ಇಡೀ ಮಾನವ ಕುಲಕ್ಕೆ ಸೀಮಿತವಾಗಿದ್ದಾರೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.                            

ಅವರು ಜಮಖಂಡಿ ನಗರದ ಬಸವ ಭವನದಲ್ಲಿ ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸೇವಾ ಸಂಘ ಹಾಗೂ ಜಮಖಂಡಿ ತಾಲೂಕಾ ಮಾಳಿ ಸಮಾಜದ  ಸಂಯುಕ್ತಾಶ್ರಯದಲ್ಲಿ ನಡೆದ ವಧು-ವರರ, ವಿಧುರ-ವಿಚ್ಚೇದಿತರ ಹಾಗೂ ಅಂಗವಿಕಲರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮಾಳಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಲು ಸದಾ ಸಿದ್ದನಿದ್ದೇನೆ. ಮಾಳಿ/ಮಾಲಗಾರ ನಿಗಮ ಮಂಡಳಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇಂತಹ ವಧು ವರ ಸಮಾವೇಶ ಮಾಡುವುದರಿಂದ ವಿವಾಹವಾಗಲು ಅನುಕೂಲ ಹಾಗೂ ಸಂಬಂಧಗಳು ವೃದ್ಧಿಸುತ್ತವೆ. ಅಂಗವಿಕರು, ವಿಧವೆ, ವಿದುರರು ಕೂಡಾ ಸಮಾಜದ ಮುಖ್ಯ ವಾಹಿನಿಯಲ್ಲಿ ಬರಲು ಸಾಧ್ಯವಾಗುತ್ತದೆ ಎಂದರು.

ನಾಗರಾಳದ ಪರಮಾನಂದ ಯೋಗಾಶ್ರಮದ ಜ್ಞಾನೇಶ್ವರ ಶ್ರೀಗಳು ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಮಾಜಕ್ಕೆ ತೋರಿಸಿ ಮಹಿಳೆಯರಿಗೆ, ಕೆಳವರ್ಗದವರಿಗೆ ಶಿಕ್ಷಣವನ್ನು ನೀಡಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬಂತೆ ಕಾಯಕದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮ ಜ್ಯೋತಿಬಾ ಹಾಗೂ ಸಾವಿತ್ರಿ ಬಾಯಿ ಪುಲೆಯವರು. ತಾಯಿ ತಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಅವರು ಉನ್ನತ ಮಟ್ಟಕ್ಕೇರಲು ಸಹಕಾರ ನೀಡಿರಿ. ಇವಾಗಿನ ಯುವ ಜನಾಂಗದದವರು ಮೊಬೈಲ್, ಟಿವಿಗೆ ಮಾರು ಹೋಗಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿದರು.                

ಶೇಗುಣಸಿಯ ಮಹಾಂತ ದೇವರು ಮಾತನಾಡಿ, ವಧು ವರರು ವರದಕ್ಷಿಣೆಗೆ ಆಸೆಪಡಬೇಡಿ. ವಿವಾಹ ನಂತರ ಸತಿ ಪತಿ ಮನಸ್ಸು ಒಂದಾಗಿ ಜೀವನ ನಡೆಸಬೇಕು. ಆಗ ತಾನೆ ಹಿರಿಯರು ವಿವಾಹ ಮಾಡಿದ ಸಾರ್ಥಕತೆಯನ್ನು ಹೊಂದಲು ಸಾಧ್ಯ ಎಂದರು.

ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿ,bಲಿಂಗಾಯತ ಸಮಾಜದಲ್ಲಿ ಮಾಳಿ ಸಮಾಜವು ಬಲಾಢ್ಯವಾಗಿ ಬೆಳೆದು ರಾಜಕೀಯವಾಗಿ ವಿಧಾನಸೌಧದಲ್ಲಿ ಶಾಸಕರಾಗಿ, ಸಂಸದರಾಗಿ ಉನ್ನತಮಟ್ಟದಲ್ಲಿ ಬೆಳೆಯಲಿ. ಮಾಳಿ ಸಮಾಜದವರು ಬೇರೆ ರಾಜ್ಯಗಳಲ್ಲಿ ರಾಜಕೀಯವಾಗಿ ಪ್ರಬಲತೆಯನ್ನು ಹೊಂದಿದ್ದಾರೆ. ಮಾಳಿ ಸಮಾಜದವರು ಪ್ರಾಮಾಣಿಕವಾಗಿ ಜೀವನ ನಡೆಸಿ ಮುಗ್ದ ಸ್ವಭಾವದಿಂದ ಸರ್ವ ಸಮಾಜದವರೊಂದಿಗೆ ಉತ್ತಮ ಅವಿನಾಭಾವ  ಸಂಬಂಧ ಹೊಂದಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ ಅಶೋಕ ನರೋಡೆ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಮಾಳಿ ಸಮಾಜ ಹಿಂದುಳಿದ ಅಲ್ಪಸಂಖ್ಯಾತರಾಗಿ ಉಳಿದಿದ್ದೇವೆ. ಹಾಗೂ ಸರಕಾರ ನಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು.

ಹಿರೇಮಠದ ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ವಧು -ವರರ ಅನ್ವೇಷಣೆ ಇಂದಿನ ದಿನ ಮಾನಗಳಲ್ಲಿ ಕಷ್ಟಕರ ಹಾಗೂ ವ್ಯಾಪಾರೀಕರಣವಾಗಿದೆ. ಹಿಂದುಳಿದ ಮಾಳಿ ಸಮಾಜ ಸಮರ್ಥವಾಗಿ ಮುಂದುವರಿಯಲು ಹಾಗೂ ವಿಚಾರ ವಿನಿಮಯ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದರು.

ಮಾಳಿ ಸಮಾಜದ ರಾಜ್ಯಾಧ್ಯಕ್ಷ ಕಾಡು ಮಾಳಿ ಮಾತನಾಡಿ, ಶಾಸಕರು, ವಿವಿಧ ರಾಜಕೀಯ ಮುಖಂಡರುಗಳಿಗೆ ನಮ್ಮ ಸಮುದಾಯ ಯಾವತ್ತೂ ಬೆಂಬಲ ನೀಡುತ್ತಾ ಇದೆ ಅವರೆಲ್ಲ ಸೇರಿ ಮಾಳಿ/ಮಾಲಗಾರ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿಕೊಡಬೇಕೆಂದು ಕೇಳಿಕೊಂಡರು.

ಅನಂತರ ಹಿರಿಯ ಸಾಹಿತಿ ಡಾ ವಿ ಎಸ್ ಮಾಳಿ, ಸಾಂಗಲಿಯ ವಿಜಯರಾವ ದುಳಬುಳ, ವಿಧಾನ ಪರಿಷತ್ ಮಾಜಿ ಸದಸ್ಯ ಜೆ. ಎಸ್.  ನ್ಯಾಮಗೌಡ ಮಾತನಾಡಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಶ್ರೀಕಾಂತ 

ಕುಲಕರ್ಣಿ, ಸಿದ್ದಣ್ಣ ಮಾಲಗಾರ, ರಂಗರಾವ ಇಂಗಳೆ, ಗಿರೀಶ ಬುಟಾಳಿ, ಸಿದ್ದರಾಮ ಕೋರೆ, ಕಾಶಿನಾಥ ಕಂಕಾಳೆ, ಕಾಶಪ್ಪ ಬಾಲಕಿಲೆ, ಮಹಾದೇವ ಬೆಳ್ಳುಡಂಗಿ, ಗುರುಪಾದ ಮೆಂಡಿಗೇರಿ, ಶ್ರೀಧರ ಕೊಣ್ಣೂರ. ಸಮಾಜ ಸೇವಕ ಹಾಗೂ ಪತ್ರಕರ್ತ  ಮುರಿಗೆಪ್ಪ ಮಾಲಗಾರ. ನಿಂಗಪ್ಪ ಮಾಲಗಾಂವಿ, ಶಂಕರ ಕಿವಟಿ, ಬಸವರಾಜ ಮಾಳಿ, ಸಂಗಮನಾಥ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲಕ್ಷ್ಮೀ ಮಾಳಿ ಪ್ರಾರ್ಥಿಸಿದರು, ಸಿ ಆರ್ ಬೆಳಗಲಿ ಸ್ವಾಗತಿಸಿದರು, ಎನ್. ಬಿ. ಮಾಲಗಾರ ನಿರೂಪಿಸಿದರು, ಬಸವರಾಜ ಲಕ್ಷ್ಮೇಶ್ವರ ವಂದಿಸಿದರು. ಈ ಸಮಾವೇಶದಲ್ಲಿ ರಾಜ್ಯದ ಎಲ್ಲ ಭಾಗದ ಮಾಳಿ ಸಮಾಜ ಬಾಂಧವರು ಸೇರಿದ್ದು, ಸುಮಾರು 250 ಕ್ಕೂ ಅಧಿಕ ವಧು ವರರು ಹೆಸರು ನೋಂದಾಯಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು