11:34 PM Friday11 - April 2025
ಬ್ರೇಕಿಂಗ್ ನ್ಯೂಸ್
ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್…

ಇತ್ತೀಚಿನ ಸುದ್ದಿ

ಕೇಂದ್ರ ಸರಕಾರದ ಹೊಸ ಮಾರ್ಗಸೂಚಿ ಉಲ್ಲಂಘಿಸಿದರೆ ಫೇಸ್‌ಬುಕ್‌, ಟ್ವಿಟರ್‌,  ಇನ್ ಸ್ಟಾಗ್ರಾಂ ಸೇವೆ ಸ್ಥಗಿತ? 

25/05/2021, 19:01

ನವದೆಹಲಿ(reporterkarnataka news): ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳ ಸೇವೆ ರದ್ದಾಗಲಿದೆಯೇ? ಇಂತಹದೊಂದು ಪ್ರಶ್ನೆ ದೇಶದಲ್ಲಿ ಉದ್ಬವಿಸಿದೆ. ಇದಕ್ಕೆ ಕಾರಣವೂ ಇದೆ. ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ ಹೊಸ ಮಾರ್ಗಸೂಚಿ ಪಾಲಿಸದಿದ್ದರೆ ಫೇಸ್‌ಬುಕ್‌ , ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಮುಂತಾದ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಈ ಜಾಲತಾಣಗಳ ಸೇವೆ ಸ್ಥಗಿತವಾಗುವ ಅಪಾಯವೂ ಇದೆ ಎಂದು ತಿಳಿದು ಬಂದಿದೆ.

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರಕಾರ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿ ನೀತಿ ಸಂಹಿತೆ ರೂಪಿಸಿತ್ತು. ಅದರ ಜಾರಿಗೆ ಮೂರು ತಿಂಗಳಿನ ಗಡುವು ನೀಡಿತ್ತು. ಇದೀಗ ಗಡುವು ಮುಕ್ತಾಯವಾಗುತ್ತಿದ್ದು, ನಿಯಮಗಳನ್ನು ಪಾಲಿಸದಿದ್ದರೆ, ಭಾರತದಲ್ಲಿ ಅಂಥ ಸಂಸ್ಥೆಗಳ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ. ಅವುಗಳ ವಿರುದ್ಧ ಕ್ರಿಮಿನಲ್‌ ವಿಚಾರಣೆಯೂ ನಡೆಯಬಹುದು. 

ಸಾಮಾಜಿಕ ಜಾಲತಾಣ ಕಂಪನಿ ‘ಕೂ’ ಹೊರತುಪಡಿಸಿ ಮಿಕ್ಕಿದ ಪ್ರಮುಖ ಜಾಲತಾಣಗಳು ನಿಯಮಾನುಸಾರ ಸ್ಥಳೀಯ ಅಹವಾಲು ಅಧಿಕಾರಿಯನ್ನು ನೇಮಕ ಮಾಡಿಲ್ಲ. ಹೊಸ ಕಾನೂನು ಪ್ರಕಾರ ರಕ್ಷಣೆ, ವಿದೇಶಾಂಗ, ಗೃಹ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ. 

ನಿಯಮಗಳು ಉಲ್ಲಂಘನೆಯಾದರೆ ಈ ಸಮಿತಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ. ಜಂಟಿ ಕಾರ್ಯದರ್ಶಿ ಅಥವಾ ಮೇಲ್ಮಟ್ಟದ ಅಧಿಕಾರಿ ನಿಯುಕ್ತಿಯಾಗಲಿದ್ದು, ಅವರು ಕಾನೂನು ಉಲ್ಲಂಘನೆಯಾದ ಪಕ್ಷದಲ್ಲಿ ಜಾಲತಾಣಗಳ ವಿಷಯಗಳನ್ನು ಬ್ಲಾಕ್‌ ಮಾಡಲು ನೇರವಾಗಿ ಸೂಚಿಸಬಹುದು. 

ಇತ್ತೀಚಿನ ಸುದ್ದಿ

ಜಾಹೀರಾತು