ಇತ್ತೀಚಿನ ಸುದ್ದಿ
ಅಥಣಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಶಾಸಕರ ಜತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ್ ದಿಢೀರ್ ಸಭೆ
25/05/2021, 18:46
ಅಥಣಿ(reporterkarnataka news): ಅಥಣಿ ತಾಲೂಕಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದ ಶಾಸಕರು ಮತ್ತು ತಾಲೂಕಿನ
ಉನ್ನತ ಅಧಿಕಾರಿಗಳ ಜತೆಯಲ್ಲಿ ತುರ್ತು ಪರಿಸ್ಥಿತಿಯ ಕುರಿತು ದಿಢೀರ್ ಸಭೆ ನಡೆಸಿದರು.
ತಾಲೂಕಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿರೇಮಠ್ ಅವರು, ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಹತೋಟಿಯಲ್ಲಿದ್ದು ಯಾರು ಭಯಪಡುವ ಅವಶ್ಯಕತೆಯಿಲ್ಲ. ಈಗಾಗಲೇ ಹೋಬಳಿ ಮಟ್ಟದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿದ್ದು, ಮುಂದೆ ಇದೇ ಕ್ರಮವಾಗಿ ಸಾರ್ವಜನಿಕ ಆಸ್ಪತ್ರೆಗೆ ಕೂಡ ಕೋವಿಡ್ ಸೆಂಟರ್ ಗಳಾಗಿ ಪರಿವರ್ತಿಸಲಾಗುವುದು ಎಂದರು.
ತಾಲೂಕಿನಲ್ಲಿ ಯಾವುದೇ ರೀತಿಯ ವ್ಯಾಕ್ಸಿನ್ ಕೊರತೆ ಇಲ್ಲ. ಆದಷ್ಟು ಬೇಗ ಎಲ್ಲ ವರ್ಗದ ಜನರಿಗೂ ವ್ಯಾಕ್ಸಿನ್ ಕೊಡಿಸಲಾಗುವುದು. ಕೊರೊನಾ ಪಾಸಿಟಿವ್ ಬಂದಂತ ವ್ಯಕ್ತಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯದೇ ಕೋವಿಡ್ ಸೆಂಟರ್ ಗಳಿಗೆ ಬಂದು ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ ಮನೆಯಲ್ಲಿ ಎಲ್ಲ ಜನರಿಗೂ ವೈರಸ್ ತಗುಲುವ ಆತಂಕವಿದ್ದು, ಆದಷ್ಟು ಕೋವಿಡ್ ಸೆಂಟರಿಗೆ ಹೋಗಿ ಚಿಕಿತ್ಸೆ ಪಡೆಯಬೇಕು
ಶಾಸಕ ಮಹೇಶ್ ಕುಮ್ಟಳ್ಳಿ, ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ್. ಮುಂತಾದವರು ಭಾಗವಹಿಸಿದ್ದರು.