8:27 PM Saturday2 - August 2025
ಬ್ರೇಕಿಂಗ್ ನ್ಯೂಸ್
Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ: ಕೊರೊನಾ ಸೋಂಕಿತ ಮನೆಗೆ ಪೋಸ್ಟರ್ ಅಂಟಿಸುವುದು ಕಡ್ಡಾಯ, ಹೊರಗಡೆ ತಿರುಗಾಡಿದರೆ ಎಫ್ ಐಆರ್

25/05/2021, 15:03

ಶ್ರೀನಿವಾಸಪುರ(reporterkarnataka news): ಕೊರೊನಾ  ವೈರಸ್ನ ಎರಡನೇ ಅಲೆ ಎಲ್ಲೆಡೆ ಹರಡುತ್ತಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ. ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಸೋಂಕಿತ ಮನೆಗಳಿಗೆ ಪೋಸ್ಟರ್ ಕಡ್ಡಾಯವಾಗಿ ಅಂಟಿಸಲಾಗುವುದು . ಕೋವಿಡ್ ಸೋಂಕಿತ ವ್ಯಕ್ತಿ ವಿನಾಕಾರಣ ಹೊರಗೆ ಓಡಾಡಿದರೆ ಸ್ಥಳದಲ್ಲಿಯೇ ಎಫ್.ಐ.ಆರ್ ದಾಖಲಿಸುವ ವಿಶೇಷ ಜವಾಬ್ದಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ , ಸೋಂಕಿತ ವ್ಯಕ್ತಿಯ ಭೇಟಿ ಸ್ಥಳದಲ್ಲಿ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಲಾಗುವುದು . ಆದ್ದರಿಂದ ಸೋಂಕಿತ ವ್ಯಕ್ತಿಗಳು ಬೇಜವಾಬ್ದಾರಿಯಿಂದ ವರ್ತನೆ ಮಾಡಿದರೆ ಸಾರ್ವಜನಿಕರು ಪಿ.ಡಿ.ಓ ಗೆ ದೂರು ಸಲ್ಲಿಸಬಹುದು , ಕೂಡಲೇ ಪೋಲೀಸ್ , ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೆಲವಂಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿಅಧಿಕಾರಿ ಎಂ . ಗೌಸ್‌ಸಾಬ್ ತಿಳಿಸಿದ್ದಾರೆ .

ಇತ್ತೀಚಿನ ಸುದ್ದಿ

ಜಾಹೀರಾತು