6:16 PM Tuesday25 - November 2025
ಬ್ರೇಕಿಂಗ್ ನ್ಯೂಸ್
Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ…

ಇತ್ತೀಚಿನ ಸುದ್ದಿ

ಭಾರತ್ ಬಂದ್ ಗೆ ಬೆಂಬಲ: ಸೆ. 27ರಂದು ಕೂಡ್ಲಗಿ ಬಂದ್ ಗೆ ರೈತ- ಕಾರ್ಮಿಕ ಸಂಘಟನೆಗಳ ಕರೆ

22/09/2021, 19:07

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೆ. 27ರಂದು ನಡೆಯುವ ಭಾರತ್ ಬಂದ್ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳಿಂದ ಕೂಡ್ಲಿಗಿ ಬಂದ್ ಕರೆ ನೀಡಲಾಗಿದೆ. 

ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಬಂದ್ ಕರೆ ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳ ಪದಾಧಿಕಾರಿಗಳು  ಪ್ರವಾಸಿ ಮಂದಿರದಲ್ಲಿ. ಸೆ22ರಂದು ಪೂರ್ವಭಾವಿ ಸಭೆ ಜರುಗಿಸಲಾಯಿತು,

ಸಭೆಯಲ್ಲಿ ಕನ್ನಡಪರ ಸಂಘಟನೆ ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ಬೆಂಬಲ ಸೂಚಿಸಿದರು. ಈ ಮೂಲಕ
ಬಂದ್ ಯಶಸ್ಸುಗೊಳಿಸಲು ಸರ್ವರು ಒಮ್ಮತದ ನಿರ್ಣಯ ಕೈಗೊಂಡರು,

ಸಾರ್ವಜನಿಕರಲ್ಲಿ ಮನವಿ: ರೈತ ಸಂಘದ ಮುಖಂಡರಾದ ಕೆ.ಕೆ. ಹಟ್ಟಿ ದೇವರಮನೆ ಮಹೇಶ್ ಮಾತನಾಡಿ, ಜನ ವಿರೋಧಿ ನೀತಿಯ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ಜರುಗುತ್ತಿರುವ ಪ್ರತಿಭಟನೆಗೆ.ಬೆಂಬಲ ವ್ಯಕ್ತಪಡಿಸಿ ಕರೆ ನೀಡಿರುವ ಭಾರತ ಬಂದ್ ಕರೆ 

ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಕೂಡ್ಲಿಗಿ ಬಂದ್ ಗೆ

ಸಾರ್ವಜನಿಕರು ಸಹಕರಿಸಬೇಕು ಹಾಗೂ ಅಂಗಡಿ ಮುಂಗಟ್ಟುಗಳು ಹಾಗೂ ಹೋಟೆಲ್ ಮಾಲೀಕರು ವಾಹನಗಳ ಕಾರ್ಮಿಕರು, ಬಂದ್ ನಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು  ಅವರು ಮನವಿ ಮಾಡಿದರು.

ಎಂ. ಬಸವರಾಜ, ಕಾರ್ಮಿಕ ಮುಖಂಡ ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ.ರೈತ ಸಂಘದ ಮುಖಂಡರಾದ ವಿ ನಾಗರಾಜ,ಎಸ್.ಭಾಷಾ ಸಾಬ್, ಕಾರ್ಯಾಧ್ಯಕ್ಷ ಕೆ.ಕೃಷ್ಣ,ಬಿ.ಚನ್ನಬಸಪ್ಪ ಹಾಗೂ ಹಾಲಸ್ವಾಮಿ ಮತ್ತು ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ದೇವದಾಸಿ ವಿಮೋಚನ ಸಂಘದ ಅಧ್ಯಕ್ಷೆ ಕೆ.ವೆಂಕಮ್ಮ,ರೈತ ಸಂಘದ ಕಾರ್ಯಕರ್ತರಾದ ಭಾಷಾಸಾಬ್ ಕೆ., ಶೇಷಪ್ಪ,ಉಲುವತ್ತಿ ಸೋಮಣ್ಣ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು