10:37 AM Saturday18 - July 2026
ಬ್ರೇಕಿಂಗ್ ನ್ಯೂಸ್
ಬಂಟ್ವಾಳ, ಬಾದಾಮಿ ಸಹಿತ ರಾಜ್ಯದ 4 ರೈಲು ನಿಲ್ದಾಣಗಳಿಗೆ ನ್ಯೂ ಲುಕ್: ಏರ್‌ಪೋರ್ಟ್… ಕೊಡಗಿನಲ್ಲಿ ಅಕ್ರಮ ಬೇಟೆಗಾರರ ಮೇಲೆ ಅರಣ್ಯ ಇಲಾಖೆ ಗುಂಡೇಟು: ಮಾಲು ಸಮೇತ ಇಬ್ಬರು… ವಿರಾಜಪೇಟೆ | ಬೇತ್ರಿ ಸೇತುವೆ ಮೇಲಿಂದ ಯುವತಿಯ ಕಾವೇರಿ ನದಿಗೆ ತಳ್ಳಿ ಕೊಲೆಗೆ… ಬೆಂಗಳೂರಿನಲ್ಲಿ ಘೋರ ದುರಂತ: ಹೋಟೆಲ್ ಲಿಫ್ಟ್ ನಲ್ಲಿ ತಲೆ ಸಿಲುಕಿ ಧಾರವಾಡ ಯುವಕ… ಮೂಡಿಗೆರೆ ಕಾಂಗ್ರೆಸ್ ನಲ್ಲಿ ಶೀತಲ ಸಮರ: ಚಿಕ್ಕಮಗಳೂರಿನಲ್ಲಿ ಭಿನ್ನಮತೀಯರ ಸಭೆ; ಶಾಸಕಿ ನಯನಾ… ಬಿಎಂಟಿಸಿ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದ ಚಾಲಾಕಿ ಮಹಿಳೆ!: ನೋಡೋಕೆ ಸೈಲೆಂಟು, ಮಾಡಿದ… ಧರ್ಮಸ್ಥಳ ಪ್ರಕರಣ: ಎಸ್ ಐಟಿಯಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ

ಇತ್ತೀಚಿನ ಸುದ್ದಿ

ಪಾರಿವಾಳಕ್ಕಿಂತ ಸ್ವಲ್ಪ ಸಣ್ಣಗಿರುವ ನೀಲಕಂಠ ಬಗ್ಗೆ ನಿಮಗೆ ಗೊತ್ತೇ?

18/07/2026, 10:35

ನೀಲಕಂಠ (Indain roller/blue jay):ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ (coracias indica)ಸಾಮಾನ್ಯವಾಗಿ ಕುರುಚಲು ಕಾಡುಗಳಲ್ಲಿ ಕಂಡು ಬರುತ್ತದೆ. ಅತೀ ಸುಂದವಾದ ಹಾಗೂ ಬುದ್ಧಿವಂತ ಪಕ್ಷಿ.

ಪಾರಿವಾಳಕ್ಕಿಂತ ಸ್ವಲ್ಪ ಚಿಕ್ಕದಾಗಿದ್ದು, ರೆಕ್ಕೆ, ಬಾಲ ಹಾಗೂ ತಲೆಯ ಮೇಲಿನ ಭಾಗವು ಆಕಾಶ ನೀಲಿ ಬಣ್ಣವನ್ನು ಕುತ್ತಿಗೆಯ ಕಪ್ಪು ಪಟ್ಟಿ, ತಲೆಯ ಬದಿಗೆ ವಿಸ್ತರಿದಂತೆ ಕಾಣುತ್ತದೆ.ದೇಹದ ಕೆಳ ಭಾಗವು ಬಿಳೀ ಬಣ್ಣವನ್ನು ಹೊಂದಿರುತ್ತದೆ. ಕೊಕ್ಕು ಹಾಗೂ ಕಾಲುಗಳ ಬಣ್ಣ ಕಪ್ಪು.
ಈ ಹಕ್ಕಿಯು ಕೂಗುವಾಗ ‘ಜೈ ‘ಪದವನ್ನು ಹೇಳಿದಂತೆ ಕೇಳಿಸುವುದರಿಂದ blue jay ಎಂಬ ಹೆಸರು ಬಂದಿದೆ. ಹಾಗೂ ಆಕ್ರಮಣ ಮಾಡುವಾಗ ತೇಲಾಡಿದಂತೆ ಕಾಣಿಸುವುದರಿಂದ Indian roller ಎಂಬ ಹೆಸರು ಬಂದಿದೆ. ಇತರ ಹಕ್ಕಿಯ ಕೂಗನ್ನು ಅನುಕರಣೆ ಮಾಡವ ಪ್ರತಿಭೆಯು ಈ ಹಕ್ಕಿಯಲ್ಲಿದೆ. ಈ ಪಕ್ಷಿಯ ಆಹಾರ ಧಾನ್ಯ, ಹಣ್ಣುಗಳು ಹಾಗೂ ಹುಳ ಹುಪ್ಪಟೆಗಳು.
ಈ ಹಕ್ಕಿಯ ಸಂತಾನೋತ್ಪತ್ತಿಯ ಕಾಲ ಮಾರ್ಚ್ ನಿಂದ ಜೂನ್ ತಿಂಗಳು. ಗಂಡು ಹಕ್ಕಿಯು ತನ್ನ ರೆಕ್ಕೆ ಬಿಚ್ಚಿ ತೇಲಾಡುವ ಪ್ರಕ್ರಿಯೆಯಿಂದ ಹೆಣ್ಣು ಹಕ್ಕಿಯನ್ನು ಆಕರ್ಷಿಸಿ, ಜೀವನ ಪರ್ಯಂತ ಏಕ ಪತ್ನಿತ್ವ ಪದ್ದತಿಯನ್ನು ಪಾಲಿಸುತ್ತದೆ. ಸಾಮಾನ್ಯವಾಗಿ ವೃತ್ತಕಾರದ ಗೂಡು ಅಥವಾ ಮರದ ಪೊಟರೆಗಳಲ್ಲಿ 4-5 ಮೊಟ್ಟೆಗಳನ್ನು ಇಟ್ಟು, ಕಾವು ಕೊಡುತ್ತದೆ.18 ದಿನಗಳಲ್ಲಿ ಮರಿ ಹೊರ ಬಂದ ನಂತರ ಗಂಡು ಹೆಣ್ಣು ಸೇರಿ ಆರೈಕೆ ಮಾಡುತ್ತದೆ.
ನೀಲಕಂಠ ಪಕ್ಷಿಯ ಜೀವಿತಾವಧಿ ಸುಮಾರು 7ವರ್ಷಗಳು ವಲಸೆ ಹೋಗುವ ಪ್ರಕ್ರಿಯೆಯು ಕೆಲವು ನೀಲಕಂಠ ಗಳಲ್ಲಿ ಕಾಣ ಬಹುದು. ಧಾರ್ಮಿಕವಾಗಿ ಶಿವ ದೇವರನ್ನು ಪೂಜಿಸುವವರು ನೀಲಾಕಂಠ ಪಕ್ಷಿಗಳನ್ನು ಶಿವನ ಸಂಕೇತ ವೆಂದು ಗೌರವಿಸುತ್ತಾರೆ.ಈ ಪಕ್ಷಿಯು ಒಡ್ಡಿಸ್ಸಾ ಹಾಗೂ ತೆಲಂಗಾಣದ ರಾಜ್ಯ ಪಕ್ಷಿಯು ಹೌದು.

✍️ಆಶ್ಲೇಷ

ಇತ್ತೀಚಿನ ಸುದ್ದಿ

ಜಾಹೀರಾತು