ಇತ್ತೀಚಿನ ಸುದ್ದಿ
ಮೆಲ್ಕಾರ್ ಸಮೀಪ ಭೀಕರ ರಸ್ತೆ ಅಪಘಾತ: ಕಾರು- ಬೈಕ್ ಡಿಕ್ಕಿ; ಸವಾರ ಪುತ್ತೂರು ನಿವಾಸಿ ಮೃತ್ಯು
05/07/2026, 21:33
ಬಂಟ್ವಾಳ( reporterkarnataka.com): ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಮತ್ತು ಮೆಲ್ಕಾರ್ ಮಧ್ಯೆ ನರಹರಿ ಪರ್ವತದ ಕೆಳಗಡೆ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆ ಸಾಗಿಸಿದ ಬಳಿಕ ಮೃತ ಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.


ಮೃತರು 34 ವರ್ಷದ ಪುತ್ತೂರು ಕೊಡಿಪ್ಪಾಡಿ ನಿವಾಸಿ ಎನ್ನಲಾಗಿದ್ದು ಬೈಕ್ ಮುಂಭಾಗ ಪುಡಿಪುಡಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಬೈಕನ್ನು 50 ಮೀಟರ್ ದೂರಕ್ಕೆ ತಳ್ಳಿದ್ದು ಕಾರಿನ ಬಾನೆಟ್ ಇಂಜಿನ್ ಸಹಿತ ಪುಡಿಯಾಗಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾಧಿಕಾರಿಗಳು ಆಗಮಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.












