8:19 PM Wednesday1 - July 2026
ಬ್ರೇಕಿಂಗ್ ನ್ಯೂಸ್
ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ…

ಇತ್ತೀಚಿನ ಸುದ್ದಿ

ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

01/07/2026, 18:46

ಬೆಂಗಳೂರು(reporterkarnataka.com): ನಮ್ಮ ಪೂರ್ವಜರು ಬಹಳ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಸಿಕ್ಕ ಬಳಿಕ ಸುಮಾರು 6-7 ರಾಜ ಸಂಸ್ಥಾನಗಳು ಭಾರತದೊಂದಿಗೆ ಸೇರುವುದಿಲ್ಲ, ನಾವು ರಾಜರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದರು. ಕಾಶ್ಮೀರ, ಗುಜರಾತ್, ಭೋಪ್ ನವಾಬರು, ಹೈದರಾಬಾದ್ ನಿಜಾಮ ಮನವೊಲಿಸಿದ ಬಳಿಕ ಭಾರತದೊಂದಿಗೆ ಸೇರ್ಪಡೆಯಾದರು. ಹೈದರಾಬಾದ್ 1 ವರ್ಷ ತಡವಾಗಿ ದೇಶವನ್ನು ಸೇರಿತು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಭಾರತ ಜೋಡೋ ಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್, ‘1952ರಲ್ಲಿ ನೆಹರು ಅವರು ಮೊದಲ ಬಜೆಟ್ ಮಂಡನೆ ಮಾಡಿದಾಗ 400 ಕೋಟಿ ಇತ್ತು. 1947ರಲ್ಲಿ ಮಧ್ಯಂತರ ಸರ್ಕಾರ ಬಂದಾಗ ನೆಹರು ಅವರು ಪ್ರಧಾನ ಮಂತ್ರಿಗಳಾಗಿದ್ದಾಗ 198 ಕೋಟಿ ಬಜೆಟ್ ಇತ್ತು, ಸಾಕ್ಷರತೆ 11% ಇತ್ತು. ದೇಶದ ಜನರು ಸ್ವಾತಂತ್ರ್ಯ ಹೋರಾಟದ 25% ಇತಿಹಾಸ ತಿಳಿದುಕೊಂಡರೆ ಸಾಕು, ಖಾಕಿ ಚಡ್ಡಿ, ಕರಿ ಟೋಪಿಯವರು ಊರು ಬಿಟ್ಟು ಹೋಗುತ್ತಾರೆ. ಆ ಸಂಘಟನೆಯವರು ಮಹಾತ್ಮಾ ಗಾಂಧಿ ಅವರ ಸರ್ವಧರ್ಮ ಸಮ ಭಾವ ಎಂಬ ತತ್ವ ಸಿದ್ಧಾಂತ, ಭಾರತದ ಸಂವಿಧಾನ ಹಾಗೂ ತ್ರಿವರ್ಣ ಧ್ವಜ ಒಪ್ಪಿಕೊಂಡರೆ ನಾವು ಅವರನ್ನು ವಿರೋಧಿಸುವುದಿಲ್ಲ. ಅವರು ನಮ್ಮ ಶತ್ರುಗಳಲ್ಲ ಅವರು ನಮ್ಮ ಭಾರತ ದೇಶದವರೇ ಆದರೆ ದೇಶದ ಭದ್ರ ಬುನಾದಿಯಾಗಿರುವ ಸಂವಿಧಾನ, ಪ್ರಜಾತಂತ್ರ, ತ್ರಿವರ್ಣಧ್ವಜ, ಜಾತ್ಯತೀತ ತತ್ವ ಒಪ್ಪಿದರೆ ನಾವು ಅವರನ್ನು ವಿರೋಧ ಮಾಡುವುದಿಲ್ಲ’ ಎಂದು ಹೇಳೀದರು.
ಈ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೂ ಸ್ವಾತಂತ್ರ್ಯ ಹೋರಾಟದ ವಿರುದ್ಧವಿದ್ದವರು, ಸ್ವಾತಂತ್ರ್ಯ ಬಂದ ನಂತರವೂ ದೇಶದ ಆಶಯಗಳಿಗೆ ವಿರುದ್ಧವಾಗಿದ್ದಾರೆ ಎಂದ ಹರಿಪ್ರಸಾದ್, ಹೀಗಾಗಿ ಅವರನ್ನು ನಾವು ವಿರೋಧ ಮಾಡಲೇಬೇಕು. ನಮ್ಮ ಮುಂದಿನ ಪೀಳಿಗೆಗೆ ನಾವು ಹಿಂಸೆ, ದ್ವೇಷ ಸುಳ್ಳಿನ ಭಾರತ ದೇಶವನ್ನು ಕೊಡಬಾರದು. ದೇಶಕ್ಕಾಗಿ ಕಾಂಗ್ರೆಸ್ ನ ಎಷ್ಟು ಜನ ಪ್ರಾಣತ್ಯಾಗ ಮಾಡಿದ್ದಾರೆ ಎಂಬುದನ್ನು ಅರಿಯಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಡತನ ಕಿತ್ತು ತಿನ್ನುವಂತಿತ್ತು. 60-70% ಜನ ಹಸಿವಿನಿಂದ ಬಳಲುತ್ತಿದ್ದರು. ವಿದೇಶದಿಂದ ಆಹಾರ ಪಡೆಯಲಾಗುತ್ತಿತ್ತು. ನೆಹರು, ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದಲ್ಲಿ ಹಸಿರು ಕ್ರಾಂತಿ ಮಾಡಿ, ವಿಶ್ವದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ರಾಷ್ಟ್ರ ಭಾರತವಾಗಿದೆ ಎಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಡೆನ್ಮಾರ್ಕ್‌ನಿಂದ ಹಾಲಿನ ಪುಡಿ ಪಡೆಯುತ್ತಿದ್ದ ಭಾರತ ಇಂದು ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ತರಕಾರಿ ಉತ್ಪಾದನೆಯಲ್ಲಿ ಚೀನಾ ಹಾಗೂ ಬ್ರೆಜಿಲ್ ನಂತರ ಭಾರತ ಸ್ಥಾನ ಪಡೆದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಇದೆಲ್ಲವನ್ನು ಮೋದಿ, ಆರ್ ಎಸ್‌ಎಸ್ ನವರು ಬಂದು ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು