2:36 PM Wednesday1 - July 2026
ಬ್ರೇಕಿಂಗ್ ನ್ಯೂಸ್
ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ…

ಇತ್ತೀಚಿನ ಸುದ್ದಿ

ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಕ್ಲಾಸ್

01/07/2026, 14:35

ತುಮಕೂರು(reporterkarnataka.com): ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ (AD) ಸಂಜೀವ್ ಕುಮಾರ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ತುಂಬಿದ ಸಭೆಯಲ್ಲೇ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಅವರು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗುತ್ತಿಗೆದಾರನಿಗೆ ವರ್ಕ್ ಆರ್ಡರ್ ನೀಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಯ ಜಾತಕವನ್ನು ಶಾಸಕರು ಜಿಲ್ಲಾಧಿಕಾರಿಗಳ ಎದುರಲ್ಲೇ ಬಿಚ್ಚಿಟ್ಟಿದ್ದು, ಈ ಹೈಡ್ರಾಮಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

*10 ಲಕ್ಷದ ಟೆಂಡರ್ ಒಪ್ಪಿಗೆಗೆ 3 ಲಕ್ಷ ಲಂಚದ ಬೇಡಿಕೆ!*
ಈ ಹಿಂದೆ ಕುಣಿಗಲ್ ತಾಲೂಕಿನ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯದಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಗುತ್ತಿಗೆದಾರ ಮಂಜುನಾಥ್ ಎಂಬುವರಿಗೆ 10 ಲಕ್ಷದ 30 ಸಾವಿರ ರೂಪಾಯಿಗೆ ಬೋಟಿಂಗ್ ಟೆಂಡರ್ ಮಂಜೂರಾಗಿತ್ತು.
ಆದರೆ, ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಕಾಮಗಾರಿಯ ಅಧಿಕೃತ ‘ವರ್ಕ್ ಆರ್ಡರ್’ (ಕೆಲಸದ ಆದೇಶ) ನೀಡಲು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಸಂಜೀವ್ ಕುಮಾರ್ ಅವರು ಬರೋಬ್ಬರಿ 3 ಲಕ್ಷ ರೂಪಾಯಿ ಲಂಚ ನೀಡುವಂತೆ ಗುತ್ತಿಗೆದಾರ ಮಂಜುನಾಥ್‌ಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ಶಾಸಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಣಿಗಲ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಭಾರಿ ಗದ್ದಲ ಉಂಟಾಗಿದೆ.

*”ದುಡ್ಡು ಬೇಕಿದ್ರೆ ನನ್ನ ಹತ್ರ ಕೇಳು, ಬಡವರನ್ನ ಯಾಕೆ ಕಾಡ್ತೀಯಾ?”*
ಲಂಚಬಾಕ ಅಧಿಕಾರಿಯ ನಡೆಗೆ ಸಭೆಯಲ್ಲೇ ತೀವ್ರ ಆಕ್ರೋಶ ಹೊರಹಾಕಿದ ಶಾಸಕ ಡಾ. ಎಚ್.ಡಿ. ರಂಗನಾಥ್, “ನಿನಗೆ ದುಡ್ಡು ಬೇಕಿದ್ದರೆ ನನ್ನ ಹತ್ತಿರ ಕೇಳು, ಇಲ್ಲವೇ ಡಿಸಿ ಹತ್ತಿರ ಕೇಳು. ಅದನ್ನು ಬಿಟ್ಟು ಕೆಲಸ ನಂಬಿಕೊಂಡಿರುವ ಬಡ ಗುತ್ತಿಗೆದಾರರನ್ನು ಯಾಕೆ ಕಾಡುತ್ತೀಯಾ?” ಎಂದು ಪ್ರಶ್ನಿಸಿ ಫುಲ್ ಕ್ಲಾಸ್ ತಗೆದುಕೊಂಡಿದ್ದಾರೆ.
“ನಿನ್ನ ಮೇಲೆ ಅಧಿಕೃತವಾಗಿ ದೂರು ಕೊಟ್ಟರೆ ಇವತ್ತೇ ನೀನು ಸಸ್ಪೆಂಡ್ ಆಗ್ತೀಯಾ ನೆನಪಿರಲಿ. ನಿನಗಿನ್ನೂ ವಯಸ್ಸು ಚಿಕ್ಕದಿದೆ, ಮೊದಲು ಬುದ್ಧಿ ಕಲಿ. ಪ್ರತಿಯೊಬ್ಬರೂ ನಿನ್ನ ಕೆಲಸ ಹಾಗೂ ಭ್ರಷ್ಟಾಚಾರವನ್ನು ವಾಚ್ ಮಾಡುತ್ತಿದ್ದಾರೆ” ಎಂದು ಶಾಸಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಡಿಸಿ ಶುಭ ಕಲ್ಯಾಣ್ ಎದುರಲ್ಲೇ ಕ್ಲಾಸ್; ತಕ್ಷಣ ವರ್ಕ್ ಆರ್ಡರ್‌ಗೆ ಆದೇಶ ಶಾಸಕರು ಅಧಿಕಾರಿಯ ಬೆಂಡೆತ್ತುತ್ತಿದ್ದಂತೆ ಎಚ್ಚೆತ್ತ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಭೆಯಲ್ಲೇ ಅಧಿಕಾರಿಗೆ ತರಾಟೆ ತೆಗೆದುಕೊಂಡರು. “ನಿನ್ನ ವಿರುದ್ಧ ಕೇಳಿಬರುತ್ತಿರುವ ಎರಡನೇ ಭ್ರಷ್ಟಾಚಾರದ ಪ್ರಕರಣ ಇದಾಗಿದೆ. ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಗುತ್ತಿಗೆದಾರನಿಗೆ ವರ್ಕ್ ಆರ್ಡರ್ ಇಶ್ಯೂ ಮಾಡಿ” ಎಂದು ಸಭೆಯಲ್ಲೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಂಜೀವ್ ಕುಮಾರ್‌ಗೆ ಖಡಕ್ ಆರ್ಡರ್ ಮಾಡಿದ್ದಾರೆ.
ಜನಪ್ರತಿನಿಧಿ ಮತ್ತು ಜಿಲ್ಲಾಧಿಕಾರಿಗಳಿಬ್ಬರೂ ಸೇರಿ ಲಂಚಬಾಕ ಅಧಿಕಾರಿಯ ಮುಖವಾಡ ಕಳಚಿದ ಈ ಘಟನೆಯ ವೀಡಿಯೋ ತುಮಕೂರು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು