9:16 PM Tuesday4 - November 2025
ಬ್ರೇಕಿಂಗ್ ನ್ಯೂಸ್
ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ…

ಇತ್ತೀಚಿನ ಸುದ್ದಿ

ಪ್ರಧಾನಿ ಮೋದಿ ಜನ್ಮದಿನಾಚರಣೆ: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಟೀ, ಪಕೋಡ ಮಾರಿ ವಿನೂತನ ಪ್ರತಿಭಟನೆ

17/09/2021, 17:57

ಮಂಗಳೂರು(reporterkarnataka.com); ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಮಿನಿ ವಿಧಾನ ಸೌಧ ಬಳಿ ಶೂ ಪಾಲೀಸ್,ಟೀ ಸ್ಟಾಲ್, ಪಕೋಡ ಸ್ಟಾಲ್ ತೆರೆದು ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.ಮೋದಿ ಜನ್ಮದಿನಾಚರಣೆಯನ್ನು‘ರಾಷ್ಟ್ರೀಯ ನಿರುದ್ಯೋಗ’ ದಿನವಾಗಿ ಆಚರಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ  ಶುಕ್ರವಾರ ಸಂಜೆ 3.00 ಗಂಟೆಗೆ ಮಂಗಳೂರಿನ ಮಿನಿ ವಿಧಾನ ಸೌಧ ಬಳಿ ಟಿ ಸ್ಟಾಲ್’, ‘ಶೂ ಪಾಲೀಸ್’, ‘ಪಕೋಡ ಸ್ಟಾಲ್’ ತೆರದು ಅಣುಕು ಪ್ರದರ್ಶನ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 


ಈ ಸಂದರ್ಭದಲ್ಲಿ ಮಾಜಿ  ಸಚಿವ ಬಿ.  ರಮಾನಾಥ ರೈ  ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಫಲತೆಯ ಬಗ್ಗೆ ವಿವರಿಸಿದರು. ಉದ್ಯೋಗ ಸೃಷ್ಟಿಗೆ ಅವರು ಒತ್ತಾಯಿಸಿದರು.  ಈ ವೇಳೆ ವೀ ವಾಂಟ್ ಎಂಪ್ಲ್ಯಾ ಮೆಂಟ್ ಎಂದು ಘೋಷಣೆಯ ಬೋರ್ಡ್ ಅಳವಡಿಸಿದಿದ್ದರು.


ಪ್ರತಿಭಟನಾ ನಿರತರು ವಾಹನ ಗಳನ್ನು ನಿಲ್ಲಿಸಿ ಉಚಿತ ಪಕೋಡ ನೀಡಿ ಪ್ರಧಾನಿ ಹುಟ್ಟುಹಬ್ಬವನ್ನು ಆಚರಣೆಯನ್ನು ಆಚರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು