ಇತ್ತೀಚಿನ ಸುದ್ದಿ
ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು ಲಿವರ್, ಕಣ್ಣುಗಳ ದಾನ
26/05/2026, 19:27
ಹಾಸನ(reporterkarnataka.com)::ಹುಟ್ಟಿದ ಮನುಷ್ಯ ಸಾವನ್ನಪ್ಪಲೇ ಬೇಕು. ಆದರೆ ಈ ಸಾವಿಗೆ ವಯಸ್ಸಿದೆ. ಆದರೆ ಅಚಾನಕ್ಕಾಗಿ ಬರುವ ಸಾವು ಕುಟುಂಬಸ್ಥರನ್ನು ಅನಾಥರನ್ನಾಗಿ ಮಾಡುತ್ತದೆ. ಆದರೆ ಇಲ್ಲೊಂದು ಕುಟುಂಬ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಅಪಘಾತದಲ್ಲಿ ಬ್ರೈನ್ ಡೆಡ್ ಆಗಿದ್ದ ವ್ಯಕ್ತಿ ಅಂಗಾಂಗ ದಾನ ಮಾಡಲಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಾಸನ ತಾಲ್ಲೂಕು ದೊಡ್ಡಕೊಂಡಗೊಳದ ಪುನೀತ್ (30)ನ ಅಂಗಾಂಗ ದಾನ ಮಾಡಿ ಇತರರಿಗೆ ಆಸರೆಯಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿರೋ ಮೃತ ಪುನೀತ್ ಅವರ ಪತ್ನಿ ಸಾವಿನ ನೋವಿನಲ್ಲೂ ಅಂಗಾಂಗ ದಾನ ಮಾಡಿದ್ದಾರೆ. ಕಳೆದ ಮೇ 16 ರಂದು ಹಾಸನ ನಗರದ ದಾಸರಕೊಪ್ಪಲು ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಪುನೀತ್ ಅವರು ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪುನೀತ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದ್ರೆ, ಭೀಕರ ಅಪಘಾತಕ್ಕೀಡಾಗಿದ್ದ ಪುನೀತ್ ಅವರ ಬ್ರೈನ್ ಸಂಪೂರ್ಣವಾಗಿ ಡೆಡ್ ಆಗಿದೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದರು. ನಂತರ ಪುನೀತ್ ಅವರ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ. ಎರಡೂ ಕಿಡ್ನಿ, ಹಾರ್ಟ್ ಮತ್ತು ಲಿವರ್, ಕಣ್ಣು ಸೇರಿ ಅಂಗಾಂಗಗಳ ದಾನ ಮಾಡಿದ್ದಾರೆ. ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ವೈದ್ಯರ ತಂಡ ಅಂಗಾಂಗ ತೆಗೆದುಕೊಂಡು ಹೋಗಿದ್ದು, ಮೃತ ಪುನೀತ್ ಕುಟುಂಬಸ್ಥರು ಸಾವಿನ ನೋವಿನಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
*ಮಹಿಳೆಯ ಕಣ್ಣು ದಾನ ಮಾಡಿದ ಪತಿ:*
ಇನ್ನು, ಕಳೆದ ಕೆಲ ದಿನಗಳ ಹಿಂದೆ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಕಾದಾಟದಲ್ಲಿ ಮಹಿಳೆ ಸಾವನ್ನಪ್ಪಿದ್ದರು. ತಮಿಳುನಾಡು ಮೂಲದ ಜಿನ್ಶು ಎಂಬ ಮಹಿಳೆ ಎರಡು ಆನೆಗಳ ಜಗಳದ ಮಧ್ಯೆ ಸಿಲುಕಿ ಸಾವನ್ನಪ್ಪಿದ್ದರು. ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ, ಮೃತ ಮಹಿಳೆಯ ಕಣ್ಣು ದಾನ ಮಾಡಿ ಕುಟುಂಬಸ್ಥರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದರು. ಆನೆ ತುಳಿತದಿಂದ ದೇಹದ ಇತರೆ ಅಂಗಾಂಗ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಹೇಳಿದ್ದರು. ಆದರೂ ಕೂಡ ಮೃತ ಮಹಿಳೆಯ ಪತಿ ಕಣ್ಣುಗಳನ್ನು ಮಾತ್ರ ದಾನ ಮಾಡಿ ಇತರರಿಗೆ ಬೆಳಕಾಗಿದ್ದಾರೆ.












