9:12 PM Tuesday30 - December 2025
ಬ್ರೇಕಿಂಗ್ ನ್ಯೂಸ್
ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ

ಇತ್ತೀಚಿನ ಸುದ್ದಿ

ಶಿರನಾಳ: ಸೆ. 18ರಂದು ಶ್ರೀ ಕೋಂತಕುಮಾರ ವೀರ ಮಲಕಾರಸಿದ್ದ ಸಿದ್ದಾಂತ ನಾಟಕ 

17/09/2021, 09:15

ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com

ವಿಜಯಪುರ ಶಿರನಾಳದ ಶ್ಯಾಮರಸಿದ್ದೇಶ್ವರ ಗಜಾನನ ತರುಣ ಸಂಘ ಆಶ್ರಯದಲ್ಲಿ ಶ್ರೀ ಕೋಂತ ಕುಮಾರ ವೀರ ಮಲಕಾರ ಸಿದ್ದ ಸಿದ್ದಾಂತ ನಾಟಕ ಶ್ಯಾಮರ ಸಿದ್ದೇಶ್ವರ ದೇವಸ್ಥಾನದ ಎದುರುಗಡೆ ಸೆ. 18ರಂದು ಸಂಜೆ 8 ಗಂಟೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ.

ಮುಮ್ಮೇಟ್ಟಗುಡ್ಡ ಶ್ರೀ ಬನಸಿದ್ಧ ಮಹಾರಾಜ ಅವರ ಸಾನಿಧ್ಯದಲ್ಲಿ ನಾಗಠಾಣ ಮಾಜಿ ಶಾಸಕ ವಿಠ್ಠಲ ದೋ. ಕಟಕದೊಂಡ ಉದ್ಘಾಟಿಸುವರು. ಮಖಣಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚವ್ಹಾಣ ಅಧ್ಯಕ್ಷತೆ ವಹಿಸುವರು. ವಿಜಯಪುರ ಜಿಪಂ ನಿಕಟಪೂರ್ವ ಅಧ್ಯಕ್ಷೆ ಸುಜಾತಾ ಸೋ. ಕಳ್ಳಿಮನಿ ಹಾಗೂ ಬಬಲೇಶ್ವರ ಪಿಎಸ್ ಐ ಸೋಮನ ಗೌಡ್ರು ಜ್ಯೋತಿ ಬೆಳಗಿಸುವರು. 

ವಿಜಯಪುರ ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಪ್ಪ ಗೋ. ದಳವಾಯಿ ಹಾಗೂ ವಿಜಯಪುರ ತಾಪಂ ನಿಕಟಪೂರ್ವ ಅಧ್ಯಕ್ಷ ಕಾಳಪ್ಪ ಬಾ. ಬೆಳ್ಳುಂಡಗಿ ಗಜಾನನ ಫೋಟೋ ಪೂಜೆ ನೆರವೇರಿಸುವರು.

ವಿಜಯಪುರ ಎಪಿಎಂಸಿ ಮಾಜಿ ಸದಸ್ಯ ಸಿದ್ದಣ್ಣ ಸಕ್ರಿ, ಮಖಣಾಪುರ ಪಿಕೆಪಿಎಸ್ ಉಪಾಧ್ಯಕ್ಷ ಪೂಜಪ್ಪ ಮಾ. ಪೂಜಾರಿ ರಂಗಪೂಜೆ ನೆರವೇರಿಸುವರು. ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ, ವಿಜಯಪುರ ತಾಪಂ ನಿಕಟಪೂರ್ವ ಉಪಾಧ್ಯಕ್ಷ ಪಿಂಟು ಗೋ ರಾಠೋಡ ಮಿಂಚು ಹಾರಿಸುವರು. ಮಖಣಾಪುರ ಗ್ರಾಪಂ ಉಪಾಧ್ಯಕ್ಷ ಧನಸಿಂಗ್ ಚವ್ಹಾಣ ಬಲೂನು ಹಾರಿಸುವರು.

ಮುಖ್ಯ ಅತಿಥಿಗಳಾಗಿ ಖ್ಯಾತ ವಾಗ್ಮಿ ಮೋಹನ ಮೇಟಿ, ಪೊಲೀಸ್ ಇಲಾಖೆಯ ದುಂಡಪ್ಪ ಥಂಬದ, ಶಿರನಾಳ ಗ್ರಾಪಂ ಸದಸ್ಯ ಬೆಳ್ಳೋಗಸಿದ್ಧ ಶಿ. ಪೂಜಾರಿ, ಮಖಣಾಪುರ ಎಲ್ ಟಿ2 ಸದಸ್ಯ ಪ್ರಕಾಶ ಮೋ. ಚವ್ಹಾಣ, ಶಿರನಾಳ ಗ್ರಾಪಂ ಸದಸ್ಯ ಡಾ. ವಿಜಯ ಕುಮಾರ್ ಸೋ. ಬಗಲಿ, ಶಿರನಾಳ ಗ್ರಾಪಂ ಸದಸ್ಯ ಕಲ್ಲಪ್ಪ ಸಿ. ತಿಕೋಟಿ, ಶಿರನಾಳ ಗ್ರಾಪಂ ಸದಸ್ಯರಾದ ಗಂಗಾಬಾಯಿ ಪಾ. ಲೋಖಂಡೆ, ಮಹಾದೇವಿ ಸು. ಹಳ್ಳಿ ಹಾಗೂ ಕೊಂದನ ಸಿ. ಸಯದ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು