4:42 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ ಇದರ ಸ್ಪೆಷಾಲಿಟಿ ಏನು? ಬೆಲೆ ಎಷ್ಟು?

16/09/2021, 19:22

ಮನೀಶ್ ಕೃಷ್ಣ ಕಲ್ಲಡ್ಕ ಮಂಗಳೂರು

info.reporterkarnataka@gmail.com

ವಿಶ್ವದಲ್ಲೇ ಅಗ್ರ ಶ್ರೇಣಿ ಪಡೆದಿರುವ ಟೆಕ್ ಕಂಪನಿ ಆಪಲ್ ಸಂಸ್ಥೆಯು ಬಹು ನಿರೀಕ್ಷಿತ ಐಫೋನ್ 13 ಸರಣಿಯನ್ನು ಬಿಡುಗಡೆಗೊಳಿಸಿದೆ. ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಹೆಸರಿನಲ್ಲಿ ಐಫೋನ್‌ 13 ಫೋನ್‌ಗಳ ಸರಣಿಯನ್ನು ಲಾಂಚ್ ಮಾಡಿದೆ. 

13 ಸರಣಿಯು ಒಟ್ಟು 4 ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಆಪಲ್ ಸಂಸ್ಥೆಯು ಆಪಲ್ ವಾಚ್ ಸೀರಿಸ್ 7 ಹಾಗೂ ಆಪಲ್‌ ಏರ್‌ಪಾಡ್‌ 3 ಡಿವೈಸ್ ಬಿಡುಗಡೆ ಮಾಡಿದೆ.

ವಿಶ್ವದ ದೈತ್ಯ ಕಂಪನಿ ಎಂದೇ ಹೆಸರು ಪಡೆದ ಆಪಲ್‌ ಸಂಸ್ಥೆಯು ಐಫೋನ್ 13, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 13 ಮಿನಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಇದನ್ನು ಐಫೋನ್‌ 12 ಸರಣಿಯ ಉತ್ತರಾಧಿಕಾರಿ ಎಂದೇ ವ್ಯಾಖ್ಯಾನಿಸಲಾಗಿದೆ. ಹೊಸ ಐಫೋನ್‌ 13 ಸರಣಿಯು ಸಾಕಷ್ಟು ಅಪಗ್ರೇಡ್‌ ಫೀಚರ್ಸ್‌ಗಳನ್ನು ಹೊಂದಿದೆ. ಈ ಮೂಲಕ ಗ್ರಾಹಕರ ತಂತ್ರಜ್ಞಾನ ಸೌಲಭ್ಯದ ದಾಹವನ್ನು ತಣಿಸಲು ಮುಂದಾಗಿದೆ. ಡಿಸೈನ್, ಕ್ಯಾಮೆರಾ, ಬ್ಯಾಟರಿ ಆಯ್ಕೆ ಕೂಡ ಅತ್ಯುತ್ತವಾಗಿದೆ.ಹಾಗಾದರೆ ಈ ನಾಲ್ಕು ಹೊಸ ಐಫೋನ್‌ಗಳ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳೋಣ.

ಐಫೋನ್ 13 ಫೋನ್‌ ಫೀಚರ್ಸ್:

* 6.1 ಇಂಚಿನ ಡಿಸ್‌ಪ್ಲೇ

* ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ 

 * 1200nits ಬ್ರೈಟ್ನೆಸ್‌

 * A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ 

* 5G ಸಪೋರ್ಟ್ 

* ಡ್ಯುಯಲ್ ರಿಯರ್ ಕ್ಯಾಮೆರಾ 

* 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್

* 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ 

* ಸಿನಿಮ್ಯಾಟಿಕ್ ಮೋಡ್ 

 * ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣ.

* ಬೆಲೆ $ 799 ಡಾಲರ್ ( 58,705 ರೂ.)

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌:

* 5.8 ಇಂಚಿನ ಡಿಸ್‌ಪ್ಲೇ 

* ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ 

* 800nits ಬ್ರೈಟ್ನೆಸ್‌ 

 * A15 ಬಯೋನಿಕ್ ಪ್ರೊಸೆಸರ್ಪ

* 5G ಸಪೋರ್ಟ್‌ 

* 50% ವೇಗದ ಗ್ರಾಫಿಕ್ಸ್‌ ಸೌಲಭ್ಯ 

* ಡ್ಯುಯಲ್ ರಿಯರ್ ಕ್ಯಾಮೆರಾ

* ಸಿನಿಮ್ಯಾಟಿಕ್ ಮೋಡ್ 

 * ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣ

* ಬೆಲೆ $ 699 ಡಾಲರ್ ಆಗಿದೆ.(51,347 ರೂ.)

ಐಫೋನ್ 13 ಪ್ರೊ ಫೋನ್‌ ಫೀಚರ್ಸ್‌:

* 6.1 ಇಂಚಿನ ಡಿಸ್‌ಪ್ಲೇ 

* ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ 

* ಸೂಪರ್ ರೆಟೀನಾ XDR ಡಿಸ್‌ಪ್ಲೇ

* ಟ್ರಿಪಲ್ ರಿಯರ್ ಕ್ಯಾಮೆರಾ

* ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್ 

* 12 ಮೆಗಾ ಪಿಕ್ಸೆಲ್ ಸೆನ್ಸಾರ್ 

* ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್ 

* ಬೆಲೆ $ 999 ಡಾಲರ್(73,3084)

ಐಫೋನ್ 13 ಪ್ರೊ ಮ್ಯಾಕ್ಸ್‌ ಫೋನ್‌ ಫೀಚರ್ಸ್‌:

* 6.7 ಇಂಚಿನ ಡಿಸ್‌ಪ್ಲೇ 

* ಅತ್ಯುತ್ತಮ ರೆಸಲ್ಯೂಶನ್

* ಸೂಪರ್ ರೆಟೀನಾ XDR ಡಿಸ್‌ಪ್ಲೇ

* ಹೈ ಎಂಡ್‌ ಬ್ರೈಟ್ನೆಸ್‌ 

 * A15 ಬಯೋನಿಕ್ ಪ್ರೊಸೆಸರ್

* ಟ್ರಿಪಲ್ ರಿಯರ್ ಕ್ಯಾಮೆರಾ

* ಟೆಲಿಫೋಟೋ, ಅಲ್ಟ್ರಾ, ವೈಲ್ಡ್‌ ಲೆನ್ಸ್

* 12 ಮೆಗಾ ಪಿಕ್ಸೆಲ್ ಸೆನ್ಸಾರ್ 

* ವಿಡಿಯೋಗಾಗಿ ಸಿನಿಮ್ಯಾಟಿಕ್ ಮೋಡ್

*ನಾಲ್ಕು ಬಣ್ಣ

* ಬೆಲೆ $ 1099 ಡಾಲರ್( 80,730 ರೂ.)

ಭಾರತದಲ್ಲಿ ಇದರ ಬೆಲೆ ಎಷ್ಟು?

ಭಾರತದಲ್ಲಿ ಐಫೋನ್ 13 ಮಿನಿಬೆಲೆ 69,900 ರೂ., 256GB ವೇರಿಯಂಟ್  79.900 ರೂ, ಮತ್ತು 512GB ವೇರಿಯಂಟ್  99,900 ರೂ.

ಐಫೋನ್ 13 ಫೋನಿನ ಬೆಲೆಗಳು ಕ್ರಮವಾಗಿ 79,900 ರೂ., 89,900 ರೂ. ಮತ್ತು 99,900 ರೂ ಗಳಾಗಿವೆ. 

ಐಫೋನ್ 13 ಪ್ರೊ ಬೆಲೆ 128 ಜಿಬಿಗೆ 1,19,900 ರೂ., 256 ಜಿಬಿಗೆ 1,29,900 ರೂ., ರೂ. 512 ಜಿಬಿಗೆ 1,49,900 ರೂ. 1 ಟಿಬಿಗೆ 1,69,900 ಗಳಾಗಿವೆ. ಅಗ್ರ ಶ್ರೇಣಿಯ ಐಫೋನ್ 13 ಪ್ರೊ ಮ್ಯಾಕ್ಸ್ ಬೆಲೆ 1,29,900 ರೂ, 1,39,900 ರೂ, 1,59,900 ರೂ., ಮತ್ತು 1,79,900 ರೂ. ಆಗಿವೆ

ಇತ್ತೀಚಿನ ಸುದ್ದಿ

ಜಾಹೀರಾತು