3:32 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಕೂಡ್ಲಗಿ ಬಸ್ ನಿಲ್ದಾಣದಲ್ಲಿ 1 ವರ್ಷದಿಂದ ವಾಸವಾಗಿರುವ ಅನಾಥನ ರಕ್ಷಿಸಿದ ಪೊಲೀಸರು; ಅನಾಥಾಶ್ರಮಕ್ಕೆ ಸೇರ್ಪಡೆ

13/09/2021, 09:41

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಅನಾಥನನ್ನು ಕೂಡ್ಲಿಗಿ ಡಿವೈಎಸ್ಪಿ ಹರೀಶ್ ನಿರ್ದೇಶನದ ಮೇರೆಗೆ  ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಶರತ್ ನೇತೃತ್ವದಲ್ಲಿ ಪೊಲೀಸ್ ರು ಸಿಂಧನೂರಿನ ಕರಣಾ ಆಶ್ರಮಕ್ಕೆ ಸೇರಿಸಿದ್ದಾರೆ.

ಪೊಲೀಸರು ನಿಯಮಾನುಸಾರ ತಮಿಳುನಾಡು ಮೂಲದ ಸುಮಾರು 50 ವಯಸ್ಸಿನ ಅನಾಥ ವ್ಯಕ್ತಿಯನ್ನು ರಕ್ಷಿಸಿ ಆತನಿಗೆ ಹೊಸ ಉಡುಪುಗಳನ್ನು ನೀಡಿ ಸತ್ಕರಿಸಿ ಮಾನವೀಯತೆ ಮೆರೆದಿದ್ದಾರೆ.

ಅನಾಥನನ್ನು ಸಿಂಧನೂರಿನ ಕರುಣಾ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಅನಾಥನನ್ನು ರಕ್ಷಣೆ ಮಾಡಿ ಆಶ್ರಯ ಕಲ್ಪಿಸುವಲ್ಲಿ ಕಾಳಜಿ ವಹಿಸಿ ಅನಾಥನ ಪಾಲಿಗೆ ಆಪ್ತ ರಕ್ಷಕರಾಗಿದ್ದಾರೆ ಪೊಲೀಸರು. ಇತ್ತೀಚೆಗೆ ಅನಾಮಧೇಯ ಶವ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು,ಅನಾಥರಿಗೆ ಅನಾಥಾಶ್ರಮದಲ್ಲಿ ಆಶ್ರಯ ಕಲ್ಪಿಸುವುದರಿಂದಾಗಿ ಪ್ರಕರಣಗಳನ್ನು ತಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ತುಂಬ‍ಾ ಮುಖ್ಯವಾಗಿದೆ ಎಂದು ಸಿಪಿಐ ವಸಂತ ಅಸೋದೆ ತಿಳಿಸಿದ್ದಾರೆ. 

ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಾಲ್ಮೀಕಿ ಮುಖಂಡ  ಹಾಗೂ ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, ಎಲ್ಲಿಯಾದರೂ ಯಾರೇ ಅನಾಥರು ಹಾಗೂ ಬುದ್ಧಿಮಾಂಧ್ಯರು  ಕಂಡು ಬಂದಲ್ಲಿ ಅಥವಾ ಅನಾಥ ವೃದ್ಧರು ಕಂಡುಬಂದಲ್ಲಿ, ಶೀಘ್ರವಾಗಿ ಹತ್ತಿರ  ಆಶ್ರಮವನ್ನು ಸಂಪರ್ಕಿಸಬಹುದಾಗಿದೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಿದೆ. ದೂರವಾಣಿ ಮೂಲಕ ಸಂಪರ್ಕಿಸಿ ರಕ್ಷಿಸಬೇಕಿದೆ. ಈ ಮೂಲಕ ಹಿರಿಯ ನಾಗರೀಕರನ್ನ ಬುದ್ದಿಮಾಂಧ್ಯರನ್ನು ರಕ್ಷಿಸಬೇಕು ಹಾಗೂ ಅಪರಾಧ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ಹೊಟೇಲ್ ಮಾಲೀಕ ಬಾಲರಾಜಪ್ಪ, ಮುಖ್ಯ ಪೊಲೀಸ್ ಪೇದೆ ಸತ್ಯಪ್ಪ, ಸಿಂಧನೂರಿನ ಕರುಣಾ ಆಶ್ರಮದ ಸ್ವಯಂ ಸೇವಕ ಪಂಪಯ್ಯಸ್ವಾಮಿ ಸೇರಿದಂತೆ ಆಸ್ರಮದ ಸಿಬ್ಬಂದಿ ಹಾಗೂ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಹಾಗೂ ನಾಗರೀಕರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು