ಇತ್ತೀಚಿನ ಸುದ್ದಿ
ಎನ್‌ಎಸ್‌ಯುಐ ‘ಬಟ್ಟೆ ಸಂಗ್ರಹ ಅಭಿಯಾನ’ಕ್ಕೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ: ಮಂಗಳೂರಿನಲ್ಲಿ ಚಾಲನೆ
23/05/2021, 20:54
ಮಂಗಳೂರು(reporterkarnataka news): ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರಂಭಿಸಿರುವ “ಬಟ್ಟೆ ಸಂಗ್ರಹ ಅಭಿಯಾನ”ಕ್ಕೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಅವರ ನೇತೃತ್ವದಲ್ಲಿ ಭಾನುವಾರ “ಬಟ್ಟೆ ಸಂಗ್ರಹ ಅಭಿಯಾನ”ಕ್ಕೆ ಚಾಲನೆ ನೀಡಿದರು.
ಭಾನುವಾರ ನಗರ ಪ್ರದೇಶದ “ಐವರಿ ಟವರ್” ಫ್ಲ್ಯಾಟ್ ನಿವಾಸಿಗಳು ತಮ್ಮ ಮನೆಗಳಲ್ಲಿ ಉಪಯೋಗಿಸದೆ ಇಟ್ಟಿವರುವಂತಹ ಬಟ್ಟೆಗಳನ್ನು ಸಂಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ತಂಡಕ್ಕೆ ಹಸ್ತಾಂತರಿಸಿದರು.
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ನೀಡಲು ಉಪಯೋಗಿಸದೆ ಇಟ್ಟಿವರುವಂತಹ ಬಟ್ಟೆಗಳನ್ನು ದಕ್ಷಿಣ ಕನ್ನಡ ಜಿಲ್ಲಾಧ್ಯಂತ ಸಂಗ್ರಹಿಸಲಾಗುತ್ತಿದೆ ಎಂದು ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ತಿಳಿಸಿದರು.