ಇತ್ತೀಚಿನ ಸುದ್ದಿ
ಬಳಕೆದಾರರಿಗೆ ತ್ವರಿತ ಭದ್ರತೆ: ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಜತೆ ಭಾರತಿ ಏರ್‌ಟೆಲ್ ಪಾಲುದಾರಿಕೆ
08/09/2021, 18:59
ನವದೆಹಲಿ(reporterkarnataka.com):
ಜಾಗತಿಕ ಸೈಬರ್ ಸೆಕ್ಯುರಿಟಿ ಕಂಪನಿ ಕ್ಯಾಸ್ಪರ್ಸ್ಕೈ ಅಂತರ್ಜಾಲ ಬಳಕೆದಾರರಿಗೆ ತ್ವರಿತ ಭದ್ರತೆ ಒದಗಿಸುವ ಸಲುವಾಗಿ ಭಾರ್ತಿ ಏರ್‌ಟೆಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಸೈಬರ್ ಬೆದರಿಕೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಕಳೆದ 2 ವರ್ಷಗಳಲ್ಲಿ ಸೈಬರ್ ಅಪರಾಧಿಗಳು ಭಾರತದಲ್ಲಿ ಇಂಟರ್ನೆಟ್ ಬಳಕೆದಾರರನ್ನು ಸಕ್ರಿಯವಾಗಿ ಗುರಿಯಾಗಿಸಿಕೊಂಡಿದ್ದಾರೆ. 2021ರ ಮೊದಲ ತ್ರೈಮಾಸಿಕದಲ್ಲಿ ಕ್ಯಾಸ್ಪರ್‍ಸ್ಕೈ ಉತ್ಪನ್ನಗಳು 37,650,472 ವಿವಿಧ ಅಂತರ್ಜಾಲದಿಂದ ಹರಡುವ ಸೈಬರ್ ಬೆದರಿಕೆಗಳನ್ನು ಪತ್ತೆ ಮಾಡಿವೆ. ಮೊಬೈಲ್ ಬಳಕೆದಾರರು ಕೂಡ ಅಪಾಯದಲ್ಲಿದ್ದಾರೆ.