ಇತ್ತೀಚಿನ ಸುದ್ದಿ
Raichuru | ಮಸ್ಕಿ ಕುಕುಂದದಲ್ಲಿ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟನೆ: ಶಾಸಕ ತುರುಹಾಳ್ ಚಾಲನೆ
19/01/2026, 21:10
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಸಮೀಪದ ಕುರುಕುಂದ ಗ್ರಾಮದಲ್ಲಿ 2025- 26ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜುರಾಗಿದ್ದು,ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಆರ್. ಬಸನಗೌಡ ತುರುಹಾಳ್ ಅವರು ನೂತನ ಪ್ರೌಢಶಾಲೆಯನ್ನು ಉದ್ಘಾಟಿಸಿದರು.

ರಾಜ್ಯ ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯದ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ ಎಂದು ಹೇಳಿದರು.
ತಾಲೂಕಿನ ಕುರುಕುಂದ ಗ್ರಾಮದಲ್ಲಿ ಆಯಸಿದ್ದ ನೂತನ ಸರ್ಕಾರಿ ಪ್ರೌಢಶಾಲೆ ಹಾಗೂ 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಗಿದೆ. ಬಡ ಮಕ್ಕಳು ಸರ್ಕಾರಿ ಶಾಲೆಯ ಅವಲಂಬಿಸಿದ್ದು ಮೂಲ ಸೌಲಭ್ಯ ಒದಗಿಸಬೇಕೆಂದು ಚಿಂತನೆ ಸರ್ಕಾರದ್ದಾಗಿದೆ. 2013ರ ಅವಧಿಯ ಹಾಗೂ ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯಕ್ಕೆ ನಮ್ಮ ಸರ್ಕಾರ ನೀಡಿದ ಆದ್ಯತೆ ಹಿಂದಿನ ಯಾವ ಸರ್ಕಾರಗಳಲ್ಲಿ ನೀಡಿಲ್ಲ.
ಗ್ರಾಮೀಣ ಭಾಗಕ್ಕೆ ಸೌಲಭ್ಯದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಪಿಸಿ ಶಾಲಿ ನೀಡಲಾಗಿದೆ. ಈಗ ಅಗತ್ಯವಿರುವ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿ ಅನುಕೂಲ ಮಾಡಿಕೊಡಲಾಗಿದೆ. ಈ ಪ್ರೌಢಶಾಲೆ ಕಟ್ಟಡ ಸೇರಿ ಅಭಿವೃದ್ಧಿಗೆ 6 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಶಿಕ್ಷಕರು ಶಿಸ್ತು ಕಾಪಾಡಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳನ್ನು ಶಿಸ್ತಿನಿಂದ ಶಾಲೆಗೆ ಕಳುಹಿಸಿ ಶಿಕ್ಷಕರು ಅವರನ್ನು ತಿದ್ದಿ ಉತ್ತಮ ಪ್ರಜೆಗಳನ್ನಾಗಿ ಮಾಡುತ್ತಾರೆ ಎಂದು ಶಾಸಕರು ನುಡಿದರು.
ಶ್ರೀ ಶೇಖರಯ್ಯ ಸ್ವಾಮಿ ಹಿರೇಮಠ ಹಾಗೂ ನಾಗಪ್ಪ ಪಟ್ಟದ ಪೂಜಾರಿ ಉಪಸ್ಥಿತಸರಿದ್ದರು. ಅಧ್ಯಕ್ಷತೆಯನ್ನು SDMC ಯ ಅಧ್ಯಕ್ಷರಾದ ವೆಂಕಪ್ಪ ಬೇರಗಿ ಅವರು ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸಲಿಂಗಪ್ಪ ಹುಡೇದ್, ರವಿಯಪ್ಪ ಸಾಹುಕಾರ್, ನಾಗಭೂಷಣ ನವಲಿ, ಅಹಿಂದ ತಾಲೂಕು ಮಾಜಿ ಅಧ್ಯಕ್ಷ ಕರೆಗೌಡ, ಪೊಲೀಸ್ ಪಾಟೀಲ್, SDMC ಉಪಾಧ್ಯಕ್ಷರಾದ ಮಲ್ಲಮ್ಮ ಗಂಡ ವೀರೇಶ್, ಸ್ಥಳ ದಾನಿಗಳಾದ ಸಣ್ಣ ವೆಂಕನಗೌಡ ತಳವಾರ್ ಮತ್ತು ಗುಡದಪ್ಪ ತಳವಾರ್, ಶಾಲಾ ಮುಖ್ಯ ಗುರುಗಳಾದ ಮಹಾಲಕ್ಷ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತೇಮ್ಮ,ಉಪಾಧ್ಯಕ್ಷರಾದ ಶಾರದಾ, ಶಂಕ್ರಪ್ಪ ಕುರುಕುಂದ ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮಣ್ ನಾಯಕ್ ವಕೀಲರು, ಶಿವಬಸನಗೌಡ ಕಾಸರೆಡ್ಡಿ, ಅಂಬಣ್ಣ ಕಾನಿಹಾಳ, ಕವಿತಾ ಪಾಲಾಕ್ಷಿ ಸಾಹುಕಾರ, ಹನುಮಂತ ನಗರೂರ, ಗುಡದಪ್ಪ ಶೇಷಗಿರಿ, ಪಂಪಣ್ಣ ಹಲಗಿ, ಹನುಮಂತ ಬಜಂತ್ರಿ ಹಾಗೂ ಊರಿನ ಮುಖಂಡರುಗಳಾದ ಸಿದ್ದನಗೌಡ ಸಂಜಿ ಮಾಟೂರ್, ಅಮರೇಗೌಡ ಕಾಸರೆಡ್ಡಿ ಪೆಟ್ರೋಲ್ ಬಂಕ್ ಶರಣಪ್ಪ ಚೆಳ್ಳೂರ್, ಸೋಮಶೇಖರ್ ಬಸಾಪುರ್ ಅಂಬರೀಶ್ ಪಗಡದಿನ್ನಿ ಬಸವರಾಜ್ ಸಿಂದನೂರ್ ಬೀರಪ್ಪ ಬುಕನಟ್ಟಿ, ಅಶೋಕ್ ಬುಕ್ಕನಟ್ಟಿ ಹಿರೇ ಲಿಂಗಪ್ಪ ಬೇವಿನಹಾಳ್, ನಾಗಪ್ಪ ಭಾವಿತಾಳ, ದುರ್ಗಪ್ಪ ಶೇಷಗಿರಿ, ಶ್ಯಾಮಣ್ಣ ಬೋವಿ, ಭೀಮರಾಯ್ ಭಜಂತ್ರಿ, ಅನಿಮೇಶ್ ಬಾಗೋಡಿ ರುದ್ರಗೌಡ ಬಜೇಗೌಡ್ರು ಚಂದ್ರಶೇಖರ್ ಬಳಗಾನೂರ, ಶಾಲೆಯ ಎಲ್ಲಾ SDMC ಯ ಪದಾಧಿಕಾರಿಗಳು, ಶಿಕ್ಷಣ ಸಂಯೋಜಕರಾದ ಕುಮಾರಸ್ವಾಮಿ ನಾಗಪ್ಪ ಕೆಲ್ಲೂರು ಮುಂತಾದವರು ಭಾಗವಹಿಸಿದ್ದರು.












