ಇತ್ತೀಚಿನ ಸುದ್ದಿ
ರಸ್ತೆ ಅಪಘಾತ: ಮಸ್ಕಿ ಸರಕಾರಿ ಆಸ್ಪತ್ರೆಯ ಜನನ ಮರಣ ನೋಂದಣಿ ಅಧಿಕಾರಿ ಅರುಣ್ ಕುಮಾರ್ ಸಾವು; ಅಂತರಗಂಗೆಯಲ್ಲಿ ಅಂತ್ಯಕ್ರಿಯೆ
17/01/2026, 20:37
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಸರಕಾರಿ ಆಸ್ಪತ್ರೆಯ ಜನನ ಮರಣ ನೋಂದಣಿ ಅಧಿಕಾರಿ ಅರುಣ್ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದ ಅರುಣ ಕುಮಾರ್ (30) ಅವರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ.
ಪ್ರತಿನಿತ್ಯ ಕಾಯಕದಂತೆ ಸರ್ಕಾರಿ ಆಸ್ಪತ್ರೆಯ ಜನನ ಮರಣ ನೋಂದಣಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅಂತರಗಂಗೆ ಅರುಣ್ ಕುಮಾರ್ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ತೆರಳುವಾಗ ಸ್ಕಿಡ್ ಆಗಿ ರಸ್ತೆ ಅಪಘಾತ ಸಂಭವಿಸಿ ತೀವ್ರ ರಕ್ತ ಶ್ರಾಮದಿಂದ ಬಾಗಲಕೋಟೆ ಆಸ್ಪತ್ರೆಗೆ ದಾಖಲಾಗಿದ್ದರು. ಸಹ ಸವಾರ ಯುವಕ ಕೂಡ ಗಾಯಗೊಂಡಿದ್ದು,ವ ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂತರಗಂಗೆಯಲ್ಲಿ ಅರುಣ್ ಅವರ ಅಂತ್ಯಕ್ರಿಯೆ ನಡೆಸಲಾಯಿತು.












