ಇತ್ತೀಚಿನ ಸುದ್ದಿ
ಗುಜರಾತ್ ನಿಂದ ಹೊಸ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಪಲ್ಟಿ; ಡ್ರೈವರ್, ಕಂಡೆಕ್ಟರ್ ಅಪಾಯದಿಂದ ಪಾರು
06/09/2021, 14:36
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ,ಸೆ 5ರಂದು ರಾತ್ರಿ ಹೊತ್ತಲ್ಲಿ ಕಂಟೈನರ್ ಲಾರಿಯೊಂದು ಉರುಳಿ ಬಿದ್ದಿದೆ.
ಕಂಟೈನರ್ ಗುಜರಾತ್ ನಿಂದ ಹೊಸ ಕಾರುಗಳನ್ನು ತುಂಬಿಕೊಂಡು ಬೆಂಗಳೂರು ಶೋರೂಂಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಲಾರಿ ಚಾಲಕನ ರಾಜಾಭಕ್ಷಿ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದಾಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಲು ಕಾರಣ ಎನ್ನಲಾಗಿದೆ.