6:00 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಕ್ಲಬ್ ಹೌಸ್ ನಲ್ಲಿ ಇಂದು ಮೊದಲ ಬಾರಿಗೆ ಪೇಜಾವರ ಶ್ರೀ, ಡಾ. ಕೆ. ಕೆ. ಮುಹಮದ್ ಅವರ ಉಪನ್ಯಾಸ; ಅಯೋಧ್ಯೆಯ ಕುರಿತು ವಿಚಾರ ಮಂಥನ

06/09/2021, 11:06

ಮಂಗಳೂರು(reporterkarnataka.com): ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’ ವಿಷಯದ ಕುರಿತು ವಿಚಾರ ಮಂಥನ ವಿಶೇಷ ಕಾರ್ಯಕ್ರಮ ಸೆಪ್ಟೆಂಬರ್ 6ರಂದು(ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ.

ಶ್ರೀರಾಮಚಂದ್ರನ ಮಂದಿರ ನಿರ್ಮಾಣವಾಗುತ್ತಿರುವ ಈ ಹೊತ್ತಿನಲ್ಲಿ, ಇಡಿಯ ಹೋರಾಟ ರೂಪುಗೊಂಡ ಬಗೆ, ವಿವಾದ ಪರಿಹಾರವಾದ ರೀತಿ, ಪುರಾತತ್ವ ದಾಖಲೆಗಳ ವಿವರಗಳು, ದೇಶದ ಪ್ರತಿಯೊಬ್ಬರಲ್ಲೂ ರಾಷ್ಟ್ರಾಭಿಮಾನ ಜಾಗೃತವಾದ ಬಗೆ.. ಇವೆಲ್ಲವನ್ನೂ ಮೆಲುಕು ಹಾಕುವ ಒಂದು ವಿಶೇಷ ಕಾರ್ಯಕ್ರಮ ದಿನಾಂಕ 6 ಸೆಪ್ಟೆಂಬರ್ 2021 (ಸೋಮವಾರ)ರಂದು ರಾತ್ರಿ 8 ಗಂಟೆಗೆ ಕ್ಲಬ್ ಹೌಸ್ ನಲ್ಲಿ ನಡೆಯಲಿದೆ. 

ಕಾರ್ಯಕ್ರಮದ ವಿವರ ಹೀಗಿದೆ:

ಶೀರ್ಷಿಕೆ: ‘ಅಯೋಧ್ಯೆ – ರಾಷ್ಟ್ರಜಾಗೃತಿಯ ಅಸ್ಮಿತೆ’

ಉಪಸ್ಥಿತಿ ಮತ್ತು ಮುಖ್ಯ ಉಪನ್ಯಾಸ: 

 ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು

(ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ ಹಾಗೂ ವಿಶ್ವಸ್ಥರು, ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್, ಅಯೋಧ್ಯಾ)

ಉಪಸ್ಥಿತಿ: ಶ್ರೀ ರಾಜಶೇಖರಾನಂದ ಶ್ರೀಪಾದಂಗಳವರು

(ಗುರುಪುರ ಶ್ರೀ ವಿದ್ಯಾಮಾನ್ಯ ತೀರ್ಥ ಸಂಸ್ಥಾನಮ್, ವಜ್ರದೇಹಿ ಮಠ)

ವಿಶೇಷ ಆಮಂತ್ರಿತರು: ಪದ್ಮಶ್ರೀ ಪುರಸ್ಕೃತ ಡಾ. ಕೆ. ಕೆ. ಮುಹಮದ್

(ನಿವೃತ್ತ ಅಧಿಕಾರಿಗಳು, ಪ್ರಾಚ್ಯ ಮತ್ತು ಪುರಾತತ್ವ ಇಲಾಖೆ, ಭಾರತ ಸರಕಾರ)

ವಿಶೇಷ ಆಮಂತ್ರಿತರು: ಶ್ರೀ ಎನ್. ರವಿಕುಮಾರ್

(ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ)

ಕಾರ್ಯಕ್ರಮವನ್ನು ಅಂಕಣಕಾರ ರೋಹಿತ್ ಚಕ್ರತೀರ್ಥ  ನಡೆಸಿಕೊಡಲಿದ್ದಾರೆ. ಗಾಯಕಿ

ರಮ್ಯಾ ವಾಸಿಷ್ಠ ಪ್ರಾರ್ಥನೆ ಹಾಡಲಿದ್ದಾರೆ. ಸಮಾಜದ ಹತ್ತುಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು