ಇತ್ತೀಚಿನ ಸುದ್ದಿ
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಕೆಲವೇ ಹೊತ್ತಿನಲ್ಲಿ ಸಂಪೂರ್ಣ ಚಿತ್ರಣ ಬಹಿರಂಗ; ಯಾರಿಗೆ ಗದ್ದುಗೆ ?
06/09/2021, 10:30
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಭಾರಿ ಕುತುಹಲದಿಂದ ಕೂಡಿದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕಲವು ಗಂಟೆಗಳಲ್ಲಿ ಬಹಿರಂಗಗೊಳ್ಳಲಿದ್ದು, ಯಾರಿಗೆ ಲಕ್ ಖುಲಾಯಿಸಲಿದೆ ಎಂಬುವುದು ಭಾರಿ ಕುತಹಲ ಮೂಡಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳಲ್ಲಿ 385 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರು. ಆ ಪೈಕಿ 58 ವಾರ್ಡ್ ಗಳಲ್ಲಿ ಬಹುತೇಕ ಘಟಾನುಗಟಿ ನಾಯಕರೆ ಅಖಾಡದಲ್ಲಿ ಇದ್ದು, ಪೈಪೋಟಿ ಜೋರಾಗಿದೆ.
ಸದ್ಯ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಇರುವ ಬಿಕೆ ಮ್ಯಾಡೆಲ್ ಹೈಸ್ಕೂಲ್ ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಡಿಸಿ ಎಂ.ಜಿ ಹಿರೇಮಠ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೋಮ್ ಓಪನ್ ಆಗಲಿದ್ದು, ಇನ್ನೇನು ಕೆಲವೆ ಹೊತ್ತಿನಲ್ಲಿ ಸಂಪೂರ್ಣ ಚಿತ್ರಣ ಗೊತ್ತಾಗಲಿದೆ.