3:31 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60 ಕಿಮೀ. ಪ್ರಯಾಣ; ಸಾರ್ವಜನಿಕರ ಆಕ್ರೋಶ

24/12/2025, 15:55

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnartaka@gmail.com

ಸರ್ಕಾರಿ ಅಧಿಕಾರಿಗಳ ಅಂಧ ದರ್ಬಾರ್‌ಗೆ ನಿಯಂತ್ರಣವೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ. ಮೂಡಿಗೆರೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಒ) ದಯಾವತಿ ವಿರುದ್ಧ ಸ್ಥಳೀಯರಿಂದ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ನಿತ್ಯವಾಗಿ 60 ಕಿಲೋಮೀಟರ್ ದೂರದ ಉಜಿರೆಯಿಂದ ಅಪ್ ಅಂಡ್ ಡೌನ್ ಮಾಡುತ್ತಿರುವ ಇಓ ಮೇಡಂ, ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಸರ್ಕಾರಿ ಜೀಪ್‌ ಮೂಲಕ ಮೂಡಿಗೆರೆವರೆಗೆ ಪಿಕ್ ಅಪ್ ಮಾಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ. ವಿಶೇಷವೆಂದರೆ, ಉಜಿರೆ–ಮೂಡಿಗೆರೆ ಮಾರ್ಗದಲ್ಲಿ ನಿತ್ಯ ಸರ್ಕಾರಿ ಬಸ್ ಸಂಚಾರವಿದ್ದರೂ ಇಓ ಮೇಡಂ ಆ ಬಸ್ಸನ್ನು ಬಳಸದೇ ಸರ್ಕಾರಿ ಜೀಪ್‌ನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.



ಪ್ರತಿದಿನ ಬೆಳಗ್ಗೆಯೇ ಮೂಡಿಗೆರೆಯಿಂದ ಸರ್ಕಾರಿ ಜೀಪ್‌ ಕೊಟ್ಟಿಗೆಹಾರಕ್ಕೆ ತೆರಳಿ ಇಓ ಅವರನ್ನು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ವಾರದಲ್ಲಿ ಎರಡು-ಮೂರು ದಿನ ಸರ್ಕಾರಿ ಜೀಪ್‌ನಲ್ಲೇ ಉಜಿರೆಗೆ ಡ್ರಾಪ್ ಮಾಡುವುದರಿಂದ ಸರ್ಕಾರದ ವಾಹನ ಹಾಗೂ ಇಂಧನ ದುರ್ಬಳಕೆ ನಡೆಯುತ್ತಿದೆ .
ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯಸ್ಥಳದಲ್ಲೇ ವಾಸವಿರಬೇಕು ಎಂಬ ಸರ್ಕಾರದ ನಿಯಮಗಳಿದ್ದರೂ, ಇಓ ಮೇಡಂ ಪಾಲಿಗೆ ಈ ಕಾನೂನು ಕಡತಗಳಲ್ಲೇ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಹಿರಿಯ ಅಧಿಕಾರಿಗಳು ಈ ವಿಷಯದ ಬಗ್ಗೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸರ್ಕಾರಿ ಗಾಡಿ ಹಾಗೂ ಸರ್ಕಾರದ ಹಣವನ್ನು ಖಾಸಗಿ ಪ್ರಯಾಣಕ್ಕೆ ಬಳಸಿಕೊಳ್ಳುತ್ತಿರುವ ಇಓ ಅವರ ವರ್ತನೆಗೆ ಮೂಡಿಗೆರೆ ತಾಲೂಕಿನ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು