ಇತ್ತೀಚಿನ ಸುದ್ದಿ
ಬೆಂಗಳೂರು ಕೂಲ್ ಕೂಲ್: ಶೀತ ಮಾರುತದಿಂದ ತತ್ತರಿಸಿದ ರಾಜಧಾನಿ ಜನತೆ: ಉತ್ತರ ಕರ್ನಾಟಕದಲ್ಲೂ ಗಡಗಡ ಚಳಿ
20/12/2025, 23:12
ಬೆಂಗಳೂರು(reporterkarnataka.com): ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತ ಮಾರುತ ತೀವ್ರಗೊಂಡಿದ್ದು, ಇನ್ನೆರಡು ದಿನ ಮುಂದುವರಿಯುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜು ಕವಿದಿದ್ದು, ಬೆಳಗ್ಗಿನ ಪ್ರಯಾಣದ ಮೇಲೆ ಪರಿಣಾಮ ಬೀರಿದೆ. ಜನರು ಶೀತ ಮಾರುತದಿಂದ ಸಂಕಷ್ಟ ಅನುಭವಿಸಬೇಕಾಯಿತು.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಬೆಳಗಾವಿ, ವಿಜಯಪುರ ಶೀತ ಮಾರುತದ ಬಾಧೆಗೆ ಒಳಗಾಗಿದೆ. ಮುಂಜಾನೆ ಸಮಯದಲ್ಲಿ ಮನೆಯೊಳಗೆ ಬೆಚ್ಚಗಿರಲು ಮತ್ತು ಜಾಗರೂಕರಾಗಿರಲು ನಿವಾಸಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ತಲುಪಬಹುದು.












