ಇತ್ತೀಚಿನ ಸುದ್ದಿ
9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ: ಆರೋಪಿ ಡಾ. ರತ್ನಾಕರ್ ಗೆ ಜಾಮೀನು
29/11/2021, 23:06
ಮಂಗಳೂರು(reporterkarnataka.com): : ಆರೋಗ್ಯ ಇಲಾಖೆಯ 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಕುಷ್ಠರೋಗ ವಿಭಾಗದ ಅಧಿಕಾರಿ ಡಾ. ರತ್ನಾಕರ್ ಗೆ ನ್ಯಾಯಾಲಯ ಜಾಮೀನು ನೀಡಿದೆ.
ಡಾ. ರತ್ನಾಕರ್ ಅವರಿಗೆ ನ್ಯಾಯಾಲಯವು 2 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿತ್ತು. ಅದರ ಅವಧಿ ಸೋಮವಾರ ಮುಗಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 3ನೇ ಜೆಎಂ ಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ಮಾಧ್ಯಮಗಳಲ್ಲಿ ಕಳೆದ ಶುಕ್ರವಾರ ಡಾ. ರತ್ನಾಕರನ ರಾಸಲೀಲೆ ವೀಡಿಯೊ ಹಾಗೂ ಫೋಟೋಗಳು ಬಹಿರಂಗಗೊಳ್ಳುತ್ತಿದ್ದಂತೆ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಈತನ ವಿರುದ್ಧ ನಾಲ್ವರು ಮಹಿಳೆಯರು ಠಾಣೆಗೆ ಬಂದು ದೂರು ನೀಡಿದ್ದರು.
ಇವರಲ್ಲಿ ಮೂವರು ಸಂತ್ರಸ್ತೆಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ರತ್ನಾಕರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯವು ಆರೋಪಿಯನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.