ಇತ್ತೀಚಿನ ಸುದ್ದಿ
60 ಸೀಟಿನ ಸರಕಾರಿ ಬಸ್ಸಿನಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು: ಮತ್ತಷ್ಟು ಮಂದಿಯ ಹತ್ತಿಸುವಂತೆ ಕಂಡೆಕ್ಟರ್ ಜತೆ ಮಹಿಳೆಯರ ವಾಗ್ವಾದ!!
29/08/2023, 15:42

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತುಂಬಿ ತುಳುಕುತ್ತಿದ್ದ ಸರಕಾರಿ ಬಸ್ಸಿನಲ್ಲಿ ಮತ್ತಷ್ಟು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ಭಾಗದ ಪ್ರವಾಸಿ ಮಹಿಳೆಯರು ಕಂಡೆಕ್ಟರ್ ಜತೆ ಜಗಳವಾಡಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.
60 ಸೀಟಿನ ಸರ್ಕಾರಿ ಬಸ್ಸಲ್ಲಿ, 150 ಪ್ರಯಾಣಿಕರು ತುಂಬಿದ್ದರು. ಬಸ್ಸಿಗೆ ಇನ್ನು ಜನರನ್ನ ಹತ್ತಿಸುವಂತೆ ಮಹಿಳೆಯರ ದುಂಬಾಲು ಬಿದ್ದರು. ಈ ಸಂದರ್ಭದಲ್ಲಿ ಕಂಟಕ್ಟರ್ ಜೊತೆ ಮಾತಿನ ಸಮರ ಮಹಿಳೆಯರಿಂದ ನಡೆಯಿತು. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಈ ಘಟನೆ ನಡೆದಿದೆ.
ಬಸ್ಸಿನಲ್ಲಿ ನಿಲ್ಲೋಕು ಜಾಗ ಇಲ್ಲ, ಬೇರೆ ಬಸ್ಸಿಗೆ ಹೋಗಿ ಅಂತ ಕಂಡಕ್ಟರ್ ಹೇಳಿದಾಗ ಮಹಿಳೆಯರು ಜಗಳ ಶುರುಮಾಡಿದರು. ಉತ್ತರ ಕರ್ನಾಟಕದಿಂದ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿರುವ ಮಹಿಳೆಯರು ಕಂಡೆಕ್ಟರ್ ಜತೆ ವಾಗ್ವಾದ ನಡೆಸಿದರು. ಪುರುಷ ಪ್ರಯಾಣಿಕರು ಬಸ್ಸಿನ ಫುಟ್ ಬೋರ್ಡ್ ಪ್ರಯಾಣಿಸಿದರು.