11:31 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

6 ಭಾಷೆಯಲ್ಲಿ ತೆರೆ ಕಾಣಲಿರುವ ‘ವಿಕ್ರಾಂತ್ ರೋಣ’: ಸೋಶಲ್ ಮೀಡಿಯಾದಲ್ಲಿ ‘ರಾ…ರಾ…ರಕ್ಕಮ್ಮ’ ಸಿಕ್ಕಾಪಟ್ಟೆ ವೈರಲ್

09/06/2022, 00:07

ಚಾರುಲತಾ ಬಸವನಗುಡಿ ಬೆಂಗಳೂರು

info.reporterkarnataka@gmail.com

ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಭಾರೀ ಸದ್ದು ಮಾಡುತ್ತಿದೆ. ಸಿನಿಮಾದ ‘ರಾ…ರಾ….ರಕ್ಕಮ್ಮ:ಹಾಡಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಸಿನಿಮಾ ಜುಲೈ 28 ರಂದು ಬಿಡುಗಡೆಯಾಗಲಿದೆ. 

‘ವಿಕ್ರಾಂತ್ ರೋಣ’ ಸಿನಿಮಾ 6 ಭಾಷೆಯಲ್ಲಿ ತೆರೆಗೆ ಬರಲಿದೆ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ. ವಿಕ್ರಾಂತ್ ರೋಣ ಕನ್ನಡ ಮಾತ್ರವಲ್ಲದೆ ಇತರ 6 ಭಾಷೆಯಲ್ಲಿ ತೆರೆಗೆ ಬರಲಿದೆ.

ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆ ಜತೆ ಇಂಗ್ಲಿಷ್ ಭಾಷೆಯಲ್ಲೂ ಇದು ತೆರೆ ಕಾಣಲಿದೆ. 3D ವರ್ಷನ್‌ನಲ್ಲಿ ರಿಲೀಸ್ ಆಗಲಿದೆ. ಇನ್ನು ವಿಶೇಷ ಏನೆಂದರೆ

‘ವಿಕ್ರಾಂತ್ ರೋಣ’ ಸಿನಿಮಾದ ಹಿಂದಿ ಅವತರಣಿಕೆಯನ್ನು ಬಾಲಿವುಡ್ ಪ್ಲೇ ಬಾಯ್, ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಅವರ ‘ಎಸ್‌ಕೆ ಫಿಲ್ಮ್ಸ್’ ಸಂಸ್ಥೆ ಪ್ರೆಸೆಂಟ್ ಮಾಡಲಿದೆ. ಇನ್ನಷ್ಟು ಕುತೂಹಲದ ಅಂಶ ಏನಂದ್ರೆ ‘ವಿಕ್ರಾಂತ್ ರೋಣ’ ಚಿತ್ರವನ್ನು ವೀಕ್ಷಿಸಿರುವ ಸಲ್ಮಾನ್ ಖಾನ್ ಅವರು ಬೆರಗಾಗಿದ್ದಾರಂತೆ. ಚಿತ್ರದ ವಿಶುವಲ್ಸ್ ಕಂಡು ಮೂಕವಿಸ್ಮಿತನಾಗಿದ್ದೇನೆ.

‘ವಿಕ್ರಾಂತ್ ರೋಣ’ ಚಿತ್ರದ ಹಿಂದಿ ಆವೃತ್ತಿಯನ್ನು ಪ್ರಸ್ತುತ ಪಡಿಸಲು ನನಗೆ ಸಂತೋಷವಾಗುತ್ತಿದೆ. ‘ವಿಕ್ರಾಂತ್ ರೋಣ’ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ 3D ಅನುಭವ ನೀಡಲಿದೆ’’ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕಿಚ್ಚ ಸುದೀಪ್ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಸುದೀಪ್ ಅವರು ವಂದನೆಗಳನ್ನು ಹೇಳಿದ್ದಾರೆ. ಈ ಮೈತ್ರಿ ‘ವಿಕ್ರಾಂತ್ ರೋಣ’ ತಂಡಕ್ಕೆ ಸಂತೋಷದ ಜತೆಗೆ ಉತ್ತೇಜನ ನೀಡಿದೆ’’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

’ಭಾರತದ ಅತಿದೊಡ್ಡ ಎಂಟರ್‌ಟೇನರ್ ಸಲ್ಮಾನ್ ಖಾನ್ ‘ವಿಕ್ರಾಂತ್ ರೋಣ’ ಚಿತ್ರದ ಹಿಂದಿ ವರ್ಷನ್‌ಅನ್ನು ಪ್ರೆಸೆಂಟ್ ಮಾಡಲಿದ್ದಾರೆ. ಎಸ್‌ಕೆ ಫಿಲ್ಮ್ಸ್‌ ಜೊತೆ ಕೈಜೋಡಿಸುತ್ತಿರುವುದು ಖುಷಿ ನೀಡಿದೆ’’ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

‘ವಿಕ್ರಾಂತ್ ರೋಣ’ ಸಿನಿಮಾ ಇಂಗ್ಲೀಷ್ ಭಾಷೆಯಲ್ಲೂ ತೆರೆಗೆ ಬರಲಿದೆ. ‘ವಿಕ್ರಾಂತ್ ರೋಣ’ ಚಿತ್ರದ ಇಂಗ್ಲೀಷ್ ವರ್ಷನ್‌ನಲ್ಲಿ ತಮ್ಮ ಪಾತ್ರಕ್ಕೆ ಕಿಚ್ಚ ಸುದೀಪ್ ಅವರೇ ಡಬ್ಬಿಂಗ್ ಮಾಡಿದ್ದಾರೆ. ಆಂಗ್ಲ ಭಾಷೆಯ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಮೊದಲ ಕನ್ನಡದ ನಟ ಎಂಬ ಖ್ಯಾತಿಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು