ಇತ್ತೀಚಿನ ಸುದ್ದಿ
ಎಂ.ಎಸ್ಸಿ ಸೈಕಾಲಜಿಯಲ್ಲಿ 5ನೇ ರ‌್ಯಾಂಕ್ ಪಡೆದ ಅಕ್ಷತಾ ಡಿ.ಸಾಲ್ಯಾನ್
04/03/2024, 20:30
ಮಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 2020-21ರ ಜನವರಿ ಬ್ಯಾಚ್‌ನ ಎಂ.ಎಸ್ಸಿ (ಸೈಕಾಲಜಿ) ವಿಭಾಗದಲ್ಲಿ ಪಾಣೆಮಂಗಳೂರು, ನಾಯಿಲ ಬೆಟ್ಟುಗದ್ದೆಯ ಅಕ್ಷತಾ ಡಿ.ಸಾಲ್ಯಾನ್ ಅವರು 5ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.
ಬಿಎಸ್ಸಿ ಹಾಗೂ ಬಿ.ಎಡ್. ಪದವೀಧರೆಯಾಗಿರುವ ಇವರು ಮಂಗಳೂರು ಖಾಸಗಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕವಯಿತ್ರಿಯೂ ಆಗಿರುವ ಇವರ ‘ಕಣಿವೆಯಾಳದ ಮೌನ’ ಕವನ ಸಂಕಲನ ಪ್ರಕಟಗೊಂಡಿದೆ. ಇವರು ದಿ.ಡೀಕಯ ಪೂಜಾರಿ ಹಾಗೂ ಭಾರತಿ ದಂಪತಿಯ ಪುತ್ರಿ.