ಇತ್ತೀಚಿನ ಸುದ್ದಿ
50 ಕೋಟಿ ದಾಟಿದ ಜನಧನ ಖಾತೆ; ಮಹಿಳೆಯರದ್ದು ಸಿಂಹಪಾಲು: ಪ್ರಧಾನಿ ಮೋದಿ ಹರ್ಷ
19/08/2023, 12:48
ಹೊಸದಿಲ್ಲಿ(reporterkarnataka.com): ಕೇಂದ್ರ ಸರಕಾರದ ಮಹತ್ವಾಂಕ್ಷೆಯ ಜನಧನ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.
50 ಕೋಟಿ ಖಾತೆಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರಿಗೆ ಸೇರಿರುವ ಕುರಿತು ಪ್ರಧಾನಿಯವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜನಧನ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿರುವ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಮಾಹಿತಿ ನೀಡಿತ್ತು. ಇದರಲ್ಲಿ ಶೇ. 56ರಷ್ಟು ಖಾತೆಗಳು ಮಹಿಳೆಯರಿಗೆ ಸೇರಿದ್ದು. ಶೇ.67ರಷ್ಟು ಖಾತೆಗಳು ಗ್ರಾಮೀಣ ಹಾಗೂ ಅರೆ ನಗರದ ಪ್ರದೇಶಕ್ಕೆ ಸೇರಿದ್ದು ಎಂದು ಸಚಿವಾಲಯ ತಿಳಿಸಿತ್ತು.