3:14 AM Sunday3 - August 2025
ಬ್ರೇಕಿಂಗ್ ನ್ಯೂಸ್
Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ

ಇತ್ತೀಚಿನ ಸುದ್ದಿ

45ನೇ ವಯಸ್ಸಿನಲ್ಲಿ ಮಗು ಹೆತ್ತು 2 ದಿನಗಳ ಹಸುಗೂಸಿನ ಮಾರಾಟ: ದಂಪತಿ ಸಹಿತ 3 ಮಂದಿ ಬಂಧನ

29/05/2025, 12:19

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಎರಡು ದಿನಗಳ ಹಸುಗೂಸನ್ನು ಮಾರಾಟ ಮಾಡಿದ ಆರೋಪದ ಮೇಲೆ ಮಗುವಿನ ಹೆತ್ತವರು ಹಾಗೂ ಸಹಕರಿಸಿದ ನಿವೃತ್ತ ನರ್ಸ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ ಘಟನೆ
ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ.
ರತ್ನ-ಸದಾನಂದ ದಂಪತಿ ಹಾಗೂ ನಿವೃತ್ತ ನರ್ಸ್ ಕುಸುಮಾ ಅವರು
ಮಗು ಮಾರಾಟಮಾಡಿ ಪೊಲೀಸರಿಗೆ ಅತಿಥಿಯಾದ ಆರೋಪಿಗಳು.
ರತ್ನ-ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದು, ಇಬ್ನರನ್ನ ಮಾರಾಟ ಮಾಡಿರೋ ಶಂಕೆ ವ್ಯಕ್ತವಾಗಿದೆ. ರತ್ನಾ ಅವರು ತನ್ನ 45ನೇ ವಯಸ್ಸಿನಲ್ಲಿ ಮಗುವನ್ನು ಹೆತ್ತು, 2 ದಿನಗಳ ಹಸುಗೂಸನ್ನು 1 ಲಕ್ಷ ರೂಪಾಯಿಗೆ
ಮಾರಾಟ ಮಾಡಿದ್ದಾರೆ. ಕುಸುಮಾ ಅವರು ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಮಗುವನ್ನು ನಿವೃತ್ತ ನರ್ಸ್ ಕುಸುಮಾ ಅವರ ಸಹೋದರ ಕಾರ್ಕಳದ ರಾಘವೇಂದ್ರ ಎಂಬುವರಿಗೆ ಮಾರಾಟ ಮಾಡಲಾಗಿದೆ.
ಎನ್.ಆರ್. ಪುರ ಪೊಲೀಸರಿಂದ ಮಗು ರಕ್ಷಣೆ ಮಾಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿ ಮಗು ಇದೆ.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು