ಇತ್ತೀಚಿನ ಸುದ್ದಿ
4 ತಿಂಗಳ ಹಿಂದೆ ಕಲ್ಲಾಪಿನಿಂದ ನಾಪತ್ತೆಯಾಗಿದ್ದ ಮಹಿಳೆ ಶವ ಮುಲ್ಕಿ ಮನೆಯೊಂದರ ಡ್ರೈನೇಜ್ ಪಿಟ್ ನಲ್ಲಿ ಪತ್ತೆ!
19/07/2023, 22:04
ಮಂಗಳೂರು(reporterkarnataka.com): ನಗರದ ಹೊರವಲಯದ ಮುಲ್ಕಿಯ ಮನೆಯೊಂದರ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ.
ಶವವಾಗಿ ಪತ್ತೆಯಾದ ಮಹಿಳೆಯನ್ನು ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಇವರು ಸುಮಾರು 4 ತಿಂಗಳ ಹಿಂದೆ ಕಾಣೆಯಾಗಿದ್ದರು.
ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್ ನಲ್ಲಿ ನಾಗಮ್ಮ ಅವರ ಶವ ಪತ್ತೆಯಾಗಿದೆ. ಪುಷ್ಪರಾಜ್ ಅಮೀನ್ ಅವರು ಮುಂಬೈನಲ್ಲಿ ವಾಸವಾಗಿದ್ದು, ಯಾವಾಗಲಾದರೂ ಒಮ್ಮೆ ಊರಿಗೆ ಬಂದು ಹೋಗುತ್ತಾ ಇರುತ್ತಾರೆ. ಇದೀಗ ಅವರು ಊರಿಗೆ ಬಂದಿದ್ದು, ಮನೆ ಹಿಂಬದಿಯ ಪಿಟ್ ನಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.