ಇತ್ತೀಚಿನ ಸುದ್ದಿ
3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ: 71 ಸಚಿವರ ಕೇಂದ್ರ ನೂತನ ಸಂಪುಟ ಅಸ್ತಿತ್ವಕ್ಕೆ
09/06/2024, 19:43

ನವದೆಹಲಿ(reporterkarnataka.com): ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮುಖ್ಯಸ್ಥ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜವಾಹರ್ ಲಾಲ್ ನೆಹರೂ ಬಳಿಕ ಮೂರನೇ ಬಾರಿ ಪ್ರಧಾನಿಯಾದ ಹೆಗ್ಗಳಿಕೆ ಅವರದ್ದಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದೇಶ- ವಿದೇಶಗಳ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು.
*ಮೋದಿ ಕ್ಯಾಬಿನೆಟ್:*
ರಾಜನಾಥ್ ಸಿಂಗ್ – ಬಿಜೆಪಿ
ಅಮಿತ್ ಶಾ – ಬಿಜೆಪಿ
ನಿತಿನ್ ಗಡ್ಕರಿ – ಬಿಜೆಪಿ
ಜ್ಯೋತಿರಾದಿತ್ಯ ಸಿಂಧಿಯಾ – ಬಿಜೆಪಿ
ಶಿವರಾಜ್ ಸಿಂಗ್ ಚೌಹಾಣ್ – ಬಿಜೆಪಿ
ಪಿಯೂಷ್ ಗೋಯಲ್ – ಬಿಜೆಪಿ
ರಕ್ಷಾ ಖಡ್ಸೆ – ಬಿಜೆಪಿ
ಜಿತೇಂದ್ರ ಸಿಂಗ್ – ಬಿಜೆಪಿ
ರಾವ್ ಇಂದರ್‌ಜೀತ್ ಸಿಂಗ್ – ಬಿಜೆಪಿ
ಮನೋಹರ್ ಲಾಲ್ ಖಟ್ಟರ್ – ಬಿಜೆಪಿ
ಮನ್ಸುಖ್ ಮಾಂಡವಿಯಾ – ಬಿಜೆಪಿ
ಅಶ್ವಿನಿ ವೈಷ್ಣವ್ – ಬಿಜೆಪಿ
ಶಂತನು ಠಾಕೂರ್ – ಬಿಜೆಪಿ
ಜಿ ಕಿಶನ್ ರೆಡ್ಡಿ – ಬಿಜೆಪಿ
ಹರ್ದೀಪ್ ಸಿಂಗ್ ಪುರಿ – ಬಿಜೆಪಿ
ಬಂಡಿ ಸಂಜಯ್ – ಬಿಜೆಪಿ
ಬಿಎಲ್ ವರ್ಮಾ – ಬಿಜೆಪಿ
ಕಿರಣ್ ರಿಜಿಜು – ಬಿಜೆಪಿ
ಅರ್ಜುನ್ ರಾಮ್ ಮೇಘವಾಲ್ – ಬಿಜೆಪಿ
ರವನೀತ್ ಸಿಂಗ್ ಬಿಟ್ಟು – ಬಿಜೆಪಿ
ಸರ್ಬಾನಂದ ಸೋನೋವಾಲ್ – ಬಿಜೆಪಿ
ಶೋಭಾ ಕರಂದ್ಲಾಜೆ – ಬಿಜೆಪಿ
ಶ್ರೀಪಾದ್ ನಾಯಕ್ – ಬಿಜೆಪಿ
ಪ್ರಹ್ಲಾದ್ ಜೋಶಿ – ಬಿಜೆಪಿ
ನಿರ್ಮಲಾ ಸೀತಾರಾಮನ್ – ಬಿಜೆಪಿ
ನಿತ್ಯಾನಂದ ರೈ – ಬಿಜೆಪಿ
ಕ್ರಿಶನ್ ಪಾಲ್ ಗುರ್ಜರ್ – ಬಿಜೆಪಿ
ಸಿಆರ್ ಪಾಟೀಲ್ – ಬಿಜೆಪಿ
ಪಂಕಜ್ ಚೌಧರಿ – ಬಿಜೆಪಿ
ಸುರೇಶ್ ಗೋಪಿ – ಬಿಜೆಪಿ
ಸಾವಿತ್ರಿ ಠಾಕೂರ್ – ಬಿಜೆಪಿ
ಗಿರಿರಾಜ್ ಸಿಂಗ್ – ಬಿಜೆಪಿ
ಗಜೇಂದ್ರ ಸಿಂಗ್ ಶೇಖಾವತ್ – ಬಿಜೆಪಿ
ಮುರಳೀಧರ ಮೊಹಲ್ – ಬಿಜೆಪಿ
ಅಜಯ್ ತಮ್ತಾ – ಬಿಜೆಪಿ
ಧರ್ಮೇಂದ್ರ ಪ್ರಧಾನ್ – ಬಿಜೆಪಿ
ಹರ್ಷ್ ಮಲ್ಹೋತ್ರಾ – ಬಿಜೆಪಿ
ಪ್ರತಾಪ್ ರಾವ್ ಜಾಧವ್ – ಶಿವಸೇನೆ (ಶಿಂಧೆ ಬಣ)
ರಾಮನಾಥ್ ಠಾಕೂರ್ – ಜೆಡಿಯು
ಲಲ್ಲನ್ ಸಿಂಗ್ – ಜೆಡಿಯು
ಮೋಹನ್ ನಾಯ್ಡು – ಟಿಡಿಪಿ
ಪಿ ಚಂದ್ರಶೇಖರ್ ಪೆಮ್ಮಸನ್ – ಟಿಡಿಪಿ
ಚಿರಾಗ್ ಪಾಸ್ವಾನ್ – ಎಲ್ಜೆಪಿ(ಆರ್)
ಜಿತನ್ ರಾಮ್ ಮಾಂಝಿ – ತುಂಬಾ
ಜಯಂತ್ ಚೌಧರಿ – RLD
ಅನುಪ್ರಿಯಾ ಪಟೇಲ್ – ಅಪ್ನಾ ದಳ(ಎಸ್)
ಚಂದ್ರ ಪ್ರಕಾಶ್ (ಜಾರ್ಖಂಡ್) – ಎಜೆಎಸ್‌ಯು
ಎಚ್‌ಡಿ ಕುಮಾರಸ್ವಾಮಿ-ಜೆಡಿ(ಎಸ್)
ರಾಮದಾಸ್ ಅಠವಳೆ – RPI