ಇತ್ತೀಚಿನ ಸುದ್ದಿ
ಕಾಫಿನಾಡಲ್ಲಿ 3 ದಿನಗಳ ದತ್ತಜಯಂತಿ ಸಂಭ್ರಮ: ಅನುಸೂಯ ಜಯಂತಿ ಪ್ರಯುಕ್ತ ದತ್ತಪೀಠಕ್ಕೆ ಮೆರವಣಿಗೆ; ಬಿಗಿ ಬಂದೋಬಸ್ತ್
12/12/2024, 13:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ 3 ದಿನಗಳ ದತ್ತಜಯಂತಿ ಸಂಭ್ರಮ ಆರಂಭಗೊಂಡಿದ್ದು, ಮೊದಲ ದಿನದ ಕಾರ್ಯಕ್ರಮ ಅನುಸೂಯ ಜಯಂತಿ ಸಂಭ್ರಮ- ಸಡಗರದಿಂದ ನಡೆದಿದೆ.
ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ ಆರಂಭವಾಯಿತು. ದತ್ತಾತ್ರೇಯರ ತಾಯಿ ಅನುಸೂಯದೇವಿಗೆ ಮಹಿಳೆಯರು ಪೂಜೆ ಸಲ್ಲಿಸಿದರು. ಸಾವಿರಾರು ಮಹಿಳೆಯರು ಮೆರವಣಿಗೆಯಲ್ಲಿ ದತ್ತಪೀಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬೋಳರಾಮೇಶ್ವರ ದೇವಾಲಯದಿಂದ ಟೌನ್ ಕ್ಯಾಂಟೀನ್ ವರೆಗೂ 2 ಕಿ.ಮೀ.ಮೆರವಣಿಗೆ ನಡೆಯಿತು. ಪೊಲೀಸರ ಸರ್ಪಗಾವಲಿನಲ್ಲಿ ಮಹಿಳೆಯರ ಮೆರವಣಿಗೆ ಸಾಗಿತು. ಚಿಕ್ಕಮಗಳೂರು ನಗರ, ದತ್ತಪೀಠದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.