ಇತ್ತೀಚಿನ ಸುದ್ದಿ
3 ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ವಿಧಿವಶ
16/07/2021, 15:04
ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಹಿರಿಯ ನಟಿ ಸುರೇಖಾ ಸಿಕ್ರಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಎರಡು ಬಾರಿ ಬ್ರೈನ್ ಸ್ಟ್ರೋಕ್ ಆಗಿ ಹಲವು ತಿಂಗಳುಗಳಿಂದ ಅವರು ಅನಾರೋಗ್ಯ ಸ್ಥಿತಿಯಲ್ಲಿದ್ದರೆನ್ನಲಾಗಿದೆ.
ಖ್ಯಾತ ಹಿಂದಿ ಚಿತ್ರನಟಿ ಮತ್ತು ಕಿರುತೆರೆ ನಟಿ ಸುರೇಖಾ ಸಿಕ್ರಿ (Surekha Sikri) ವಿಧಿವಶರಾಗಿದ್ಧಾರೆ. ರಂಗಭೂಮಿ ಕಲಾವಿದೆಯೂ ಆಗಿದ್ದ ಸುರೇಖಾ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗಂಡ ಹಾಗೂ ಒಬ್ಬ ಮಗನನ್ನು ಅವರು ಅಗಲಿದ್ದಾರೆ. ಎರಡು ಬಾರಿ ಅವರಿಗೆ ಬ್ರೇನ್ ಸ್ಟ್ರೋಕ್ ಹೊಡೆದಿತ್ತು. ಅದರಿಂದ ಸಾಕಷ್ಟು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರೆನ್ನಲಾಗಿದೆ.