5:08 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

27ನೇ ಬ್ರಹ್ಮೋತ್ಸವ: ನಂಜನಗೂಡು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ವತಿಯಿಂದ ಬೃಹತ್ ಪಾದಯಾತ್ರೆ

26/12/2024, 17:41

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡಿನ ಪವಿತ್ರ ಯಾತ್ರಾಸ್ಥಳವಾದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವತಿಯಿಂದ ಇಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.


ಹತ್ತು ದಿನಗಳ ಕಾಲ ನಡೆಯುತ್ತಿರುವ 27ನೇ ಬ್ರಹ್ಮೋತ್ಸವದ ಅಂಗವಾಗಿ ಇಂದು ಮೈಸೂರಿನ ಶ್ರೀ ದತ್ತ ವೆಂಕಟರಮ ಸ್ವಾಮಿ ದೇವಾಲಯದಿಂದ ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದ ವರೆಗೆ ಇರುಮುಡಿ ಹೊತ್ತ ನೂರಾರು ಅಯ್ಯಪ್ಪ ಭಕ್ತರು ಪಾದಯಾತ್ರೆ ನಡೆಸುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು.
ಮಂಗಳವಾರ ರಾತ್ರಿ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸುಮಾರು 200ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಇರುಮುಡಿ ಕಟ್ಟಿಸಿಕೊಂಡು ರಾತ್ರಿ ಮೈಸೂರಿನ ದತ್ತ ವೆಂಕಟರಮಣಸ್ವಾಮಿ ದೇವಾಲಯಕ್ಕೆ ವಾಹನದಲ್ಲಿ ತೆರಳಿ ವಾಸ್ತವ್ಯ ಹೂಡಿದ್ದರು.
ಇಂದು ಬೆಳಗಿನ ಜಾವ 4 ಗಂಟೆಗೆ ಅಲ್ಲಿಂದ ಮೈಸೂರು ಊಟಿ ಹೆದ್ದಾರಿಯಲ್ಲಿ ಸುಮಾರು 25 ಕಿಮಿ ದೂರ ಬರಿಗಾಲಲ್ಲಿ ಪಾದಯಾತ್ರೆ ನಡೆಸಿ ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ತಲುಪಿದ್ದಾರೆ. ದೇವಾಲಯ ತಲುಪಿದ ಭಕ್ತರು ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ಪವಿತ್ರ 18 ಮೆಟ್ಟಿಲುಗಳ ಬಳಿ ಕರ್ಪೂರ ಹಚ್ಚಿ ಈಡುಗಾಯಿ ಒಡೆದು ಪವಿತ್ರ ಮೆಟ್ಟಿಲುಗಳನ್ನು ಹತ್ತುವ ಮೂಲಕ ದೇವಾಲಯ ಪ್ರವೇಶಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಭಕ್ತಿ ಭಾವ ಮೆರೆದರು.
ಇದಕ್ಕೂ ಮುನ್ನ ಪಾದಯಾತ್ರೆಯಲ್ಲಿ ಬಂದ ಎಲ್ಲಾ ಭಕ್ತರಿಗೆ ದಾನಿಗಳಿಂದ ಸುಕ್ಷೇತ್ರ ಶ್ರೀ ಮಲ್ಲನ ಮೂಲೆ ಮಠದ ದಾಸೋಹ ಭವನದಲ್ಲಿ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.ಅಲ್ಲದೆ ದಾರಿ ಉದ್ದಕ್ಕೂ ಅಲ್ಲಲ್ಲಿ ಕೆಲವು ದಾನಿಗಳು ಹಾಗೂ ಭಕ್ತರು ಪಾದ ಯಾತ್ರೆಯಲ್ಲಿ ಬಂದ ಗುರುಸ್ವಾಮಿಗಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ ಬಂದ ಎಲ್ಲ ಭಕ್ತರಿಗೆ ಕಾಫಿ, ಟೀ, ಬಿಸ್ಕೆಟ್,ನೀರು, ತಂಪು ಪಾನಿಯ ನೀಡಿ ಸತ್ಕರಿ ಸುತ್ತಿದ್ದದ್ದು ವಿಶೇಷವಾಗಿತ್ತು
ಪಾದಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ವಯೋ ವೃದ್ಧರಾಧಿಯಾಗಿ ಪಾಲ್ಗೊಂಡು ಸುಮಾರು 25 ಕಿಮೀ ಕ್ರಮಿಸಿ ತಮ್ಮ ಭಕ್ತಿ ಭಾವ ಸಮರ್ಪಿಸಿದ್ದಾರೆ
ದೇವಾಲಯಕ್ಕೆ ಬಂದ ಎಲ್ಲಾ ಭಕ್ತರಿಗೆ ದಾನಿಗಳು ಹಾಗೂ ದೇವಾಲಯದ ವತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು.
ನಂತರ ಗುರುಸ್ವಾಮಿಗಳಾದ ಶ್ರೀ ದೇವರಾಜ ಸ್ವಾಮಿಗಳು ಮಾತನಾಡಿ ಶ್ರೀ ಕ್ಷೇತ್ರ ಶಬರಿಮಲೆ ಕ್ಷೇತ್ರಕ್ಕೆ ಹೋಗಲಾಗದ ಎಷ್ಟೋ ಭಕ್ತರು ಇಲ್ಲೇ ಇರುಮುಡಿ ಕಟ್ಟಿಸಿಕೊಂಡು ಮೈಸೂರಿನಿಂದ ಪಾದಯಾತ್ರೆ ನಡೆಸಿ ಬಂದು ದೇವರ ದರ್ಶನ ಪಡೆಯುತ್ತಾರೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು