ಇತ್ತೀಚಿನ ಸುದ್ದಿ
27ರಂದು ಎರ್ಮೆಮಜಲು ಯುವ ಕೇಸರಿ ಭವನ ಲೋಕಾರ್ಪಣೆ
25/02/2023, 20:51
ಬಂಟ್ವಾಳ(reporterkarnataka.com): ವೀರಕಂಬ ಗ್ರಾಮದ ಯುವ ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು ವತಿಯಿಂದ ಎರ್ಮೆಮಜಲು ಜಂಕ್ಷನ್ ನಲ್ಲಿ ನಿರ್ಮಿಸಲಾದ “ಯುವ ಕೇಸರಿ ಭವನ” ದ ಲೋಕಾರ್ಪಣ ಕಾರ್ಯಕ್ರಮ ಫೆ. 27ರಂದು ನಡೆಯಲಿದೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕುಣಿತ ಭಜನೆ ಹಾಗೂ ಅನ್ನ ಸಂತರ್ಪಣದ ಕಾರ್ಯಕ್ರಮ ಜರಗಲಿರುವುದು. ಎಂದು ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು (ರಿ) ಇದರ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.