ಇತ್ತೀಚಿನ ಸುದ್ದಿ
23.24 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್
22/03/2025, 18:26

ಬೆಂಗಳೂರುನಗರಜಿಲ್ಲೆ(reporterkarnataka.com): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 23.24 ಕೋಟಿ ಅಂದಾಜು ಮೌಲ್ಯದ ಒಟ್ಟು 9 ಎಕರೆ 19.08 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.
ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಗುಂಡುತೋಪು, ಸ್ಮಶಾನ, ಕಾಲುವೆ ಮತ್ತು ಸರ್ಕಾರಿ ಖರಾಬ್ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ವಿಟ್ಟಸಂದ್ರ ಗ್ರಾಮದ ಸ.ನಂ 81ರ ಸರ್ಕಾರಿ ಗೋಮಾಳ ರಂತೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 5.00 ಕೋಟಿಗಳಾಗಿರುತ್ತದೆ. ಉತ್ತರಹಳ್ಳಿ ಹೋಬಳಿಯ ಸೋಮನಹಳ್ಳಿ ಗ್ರಾಮದ ಸ.ನಂ 225 ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.50 ಕೋಟಿಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಯಾರಂಡಹಳ್ಳಿ ಗ್ರಾಮದ ಸ.ನಂ 4ರ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.20 ಕೋಟಿಗಳಾಗಿರುತ್ತದೆ. ಜಿಗಣಿ ಹೋಬಳಿಯ ಬನ್ನೇರುಘಟ್ಟ ಗ್ರಾಮದ ಸ.ನಂ 147ರ ಸರ್ಕಾರಿ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.12 ಗುಂಟೆಗಳಾಗಿದ್ದು,ಅಂದಾಜು ಮೌಲ್ಯ ರೂ 0.60 ಕೋಟಿಗಳಾಗಿರುತ್ತದೆ. ಕಸಬಾ ಹೋಬಳಿಯ ಸಮಂದೂರು ಗ್ರಾಮಗಳ ಸ.ನಂ 213 ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-05 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.20 ಕೋಟಿಗಳಾಗಿರುತ್ತದೆ. ಕಸಬಾ ಹೋಬಳಿಯ ಚಿಕ್ಕಹೆಗಡೆ ಗ್ರಾಮದ ಸ.ನಂ 102ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-04.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.19 ಕೋಟಿಗಳಾಗಿರುತ್ತದೆ. ಅತ್ತಿಬೆಲೆ ಹೋಬಳಿಯ ನೆರಳೂರು ಗ್ರಾಮದ ಸ.ನಂ 217ರ ರಾಜಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-30 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.49 ಕೋಟಿಗಳಾಗಿರುತ್ತದೆ.
ಯಲಹಂಕ ತಾಲ್ಲೂಕಿನ ಯಲಹಂಕ ಹೋಬಳಿಯ ತಿಂಡು ಗ್ರಾಮದ ಸ.ನಂ 79 ಸರ್ಕಾರಿ ಜಮೀನು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.40 ಕೋಟಿಗಳಾಗಿರುತ್ತದೆ. ಯಲಹಂಕ ಹೋಬಳಿ, ಚಿಕ್ಕಬೆಟ್ಟಹಳ್ಳಿ, ಗ್ರಾಮದ ಸ.ನಂ. 46ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.85 ಕೋಟಿಗಳಾಗಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಸ.ನಂ 58, 60, 62, 65 ಮತ್ತು 55ರ ಮಧ್ಯ ದ ಜಮೀನು, ಹುದ್ದು ಗಿಡದ ಒಣಿ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1-00 ಎಕರೆ ಅಂದಾಜು ಮೌಲ್ಯ ರೂ 3.00 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಹುಲ್ಲೇಗೌಡನಹಳ್ಳಿ ಗ್ರಾಮದ ಸ.ನಂ 98 ಸರ್ಕಾರಿ ಗುಂಟುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 2-21 ಎಕರೆ/ ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 4.00 ಕೋಟಿಗಳಾಗಿರುತ್ತದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಹಂಚರಹಳ್ಳಿ ಗ್ರಾಮದ ಸ.ನಂ 51ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.00 ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ದೇವರಬೀಸನಹಳ್ಳಿ ಗ್ರಾಮದ .ಸ.ನಂ: 48ರ ಸರ್ಕಾರಿ ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.02 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 6.00 ಕೋಟಿಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿಯಾದ ಜಗದೀಶ್ ಕೆ ನಾಯಕ್ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.